ರೀಲ್ಸ್​ ಹುಚ್ಚಾಟಕ್ಕೆ ಕಾಡು ಕರಡಿಗೆ ಜ್ಯೂಸ್​ ಕುಡಿಸಿದ ಯುವಕ! ವಿಡಿಯೋ ವೈರಲ್​| Cold Drink

untitled-design-2025-09-13t111526228-68c5051020a22
Published on

Cold Drink: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಯುವಕನೊಬ್ಬ ಕಾಡು ಕರಡಿಗೆ ಕುಡಿಯಲು ತಂಪು ಪಾನೀಯದ ಬಾಟಲಿಯನ್ನು ನೀಡಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವೈರಲ್​ ಆಗಿರುವ ವಿಡಯೋದಲ್ಲಿ ಯುವಕನೊಬ್ಬ ತಂಪು ಪಾನೀಯದ ಬಾಟಲಿಯನ್ನು ಹಿಡಿದು ಕರಡಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ಅವನು ಬಾಟಲಿಯನ್ನು ಪ್ರಾಣಿಯ ಮುಂದೆ ಇರಿಸಿ ಹಿಂತಿರುಗುತ್ತಾನೆ. ಈ ವೇಳೆ ಕರಡಿ ಆತ ಇಟ್ಟಿರುವ ಬಾಟಲಿನಲ್ಲಿರುವ ಪಾನೀಯವನ್ನು ಸೇವಿಸಲು ಪ್ರಾರಂಭಿಸಿರುವುದು ಕಂಡು ಬಂದಿದೆ.

ಈ ವಿಡಿಯೋವನ್ನು ಛತ್ತೀಸ್‌ಗಢದ ನಾರಾ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯುವಕನ ಹುಚ್ಚಾಟ ಸೋಶಿಯಲ್​ ಮಿಡಿಯಾದಲ್ಲಿ ಲೈಕ್​ ಪಡೆಯುವ ಸಲುವಾಗಿ ಈ ವಿಡಿಯೋ ಮಾಡಿದ್ದಾನೆ ಎಂದು ಈ ವಿಡಿಯೋ ತೋರಿಸುತ್ತದೆ.

ಈ ರೀತಿಯ ತಂಪು ಪಾನೀಯಗಳು ಅಥವಾ ಇನ್ನಿತರ ಆಹಾರಗಳನ್ನು ನೀಡುವುದರಿಂದ ಕಾಡುಪ್ರಾಣಿಗಳಿಗೆ ಮಾರಕ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವು ಕರಡಿಯ ಜೀರ್ಣಾಂಗ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಹಾಗೆಯೇ ಇವು ಕಾಡಿನಲ್ಲಿರಲು ಇಚ್ಚಿಸದೆ ಮಾನವರ ಆಹಾರಗಳ ಮೇಲೆ ಅವಲಂಬಿತವಾಗುತ್ತವೆ ಎಂದಿದ್ದಾರೆ.

ವೈರಲ್​ ವಿಡಿಯೋವನ್ನು ಗಮನಕ್ಕೆ ತೆಗೆದುಕೊಂಡ ಅರಣ್ಯ ಇಲಾಖೆಯು ಯುವಕನ ಪತ್ತೆಗಾಗಿ ಪ್ರಯತ್ನಗಳನ್ನು ನಡೆಸುತ್ತಿದೆ. ಹಾಗೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸುದ್ದಿಮೂಲಗಳು ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net