

ನವದೆಹಲಿ: ದೇಶದಲ್ಲಿ ಲಸಿಕೆ ಅಭಿಯಾನ ಪ್ರಗತಿಯಲ್ಲಿದ್ದು, 18 ವರ್ಷ ಮೇಲ್ಪಟ್ಟ ಜನಸಂಖ್ಯೆಯ ಒಟ್ಟಾರೆ ಶೇಕಡ 20.5 ಜನರಿಗೆ ಲಸಿಕೆ ಸಿಕ್ಕಿದೆ. ಈ ಪೈಕಿ 1000 ಪುರುಷರಿಗೆ ಲಸಿಕೆ ನೀಡಿದ್ದರೆ, 854 ಮಹಿಳೆಯರಿ ಗಷ್ಟೇ ಲಸಿಕೆ ನೀಡಲಾಗಿದೆ. ಕೇರಳ ಮತ್ತು ಛತ್ತೀಸ್ಗಢಗಳಲ್ಲಿ ಮಾತ್ರವೇ ಲಸಿಕೆ ಪಡೆದವರ ಸಂಖ್ಯೆಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಮುಂಚೂಣಿಯಲ್ಲಿದ್ದಾರೆ. ಛತ್ತೀಸ್ಗಢದಲ್ಲಿ ಪುರುಷ ಮತ್ತು ಸ್ತ್ರೀಯರ ಅನುಪಾತ ಪ್ರತಿ 1,000ಕ್ಕೆ 1045 ಇದೆ. ಕೇರಳದಲ್ಲಿ ಪ್ರತಿ 1,000 ಪುರುಷರಿಗೆ 1,087 ಮಹಿಳೆಯರು ಲಸಿಕೆಪಡೆದುಕೊಂಡಿದ್ದಾರೆ.
ಕಾರಣ ಏನು?: ಲಸಿಕೆ ಹಾಕಿಸಿಕೊಳ್ಳುವುದಕ್ಕಾಗಿ ಕೋವಿನ್ ಆ್ಯಪ್ನಲ್ಲಿ ಸ್ವತ@ ಹೆಸರು ನೋಂದಾಯಿಸಿಕೊಳ್ಳಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಲಸಿಕೆ ಹಾಕಿಸುವ ಕೇಂದ್ರಕ್ಕೆ ತೆರಳುವುದಕ್ಕೂ ಮಹಿಳೆಯರ ಜತೆಗೆ ಯಾರಾದರೂ ಹೋಗಲೇ ಬೇಕು. ಇಂತಹ ಕೆಲವು ಸಾಮಾಜಿಕ ಸೂಕ್ಷ$್ಮ ವಿಚಾರಗಳ ಕಾರಣದಿಂದಲೇ ಲಸಿಕೆ ಹಾಕಿಸಿಕೊಳ್ಳುವಲ್ಲಿ ಮಹಿಳೆಯರು ಹಿಂದುಳಿದಿದ್ದಾರೆ. ಇದಲ್ಲದೇ ಬೇರೆ ಕೆಲವು ಕಾರಣಗಳಿವೆ ಎಂಬುದನ್ನೂ ನಿರಾಕರಿಸುವಂತಿಲ್ಲ ಎನ್ನುತ್ತಿದೆ ಅಧ್ಯಯನ ವರದಿ.
800ಕ್ಕೂ ಕಡಿಮೆ
ಜಮ್ಮು&ಕಾಶ್ಮೀರದಲ್ಲಿ ಒಟ್ಟು ಜನಸಂಖ್ಯೆಯ ಶೇ. 32 ಜನರಿಗೆ ಲಸಿಕೆ ಸಿಕ್ಕಿದೆ. 1,000 ಪುರುಷರಿಗೆ 913 ಮಹಿಳೆಯರೆಂಬ ಲಿಂಗಾನುಪಾತವಿದೆ. ಇಲ್ಲಿ 1,000ಕ್ಕೆ 711 ಮಹಿಳೆಯರಿಷ್ಟೇ ಲಸಿಕೆ ಲಭ್ಯವಾಗಿದೆ. ಇದೇ ರೀತಿ ದೆಹಲಿಯಲ್ಲಿ ಲಸಿಕೆ ಪಡೆದ ಮಹಿಳೆಯರ ಪ್ರಮಾಣ ಶೇಕಡ 42. ಪ್ರತಿ 1,000ಕ್ಕೆ 722 ಮಹಿಳೆಯರಷ್ಟೇ ಲಸಿಕೆ ಪಡೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ಹೆಚ್ಚಿರುವ ಪ್ರದೇಶದಲ್ಲಿ ಈ ಪ್ರಮಾಣದಲ್ಲಿ ಬಹಳಷ್ಟು ವ್ಯತ್ಯಾಸವನ್ನು ಗಮನಿಸಬಹುದು.
ವಸ್ತುಸ್ಥಿತಿ
ಲಸಿಕೆ ಅಭಿಯಾನ ಗರಿಷ್ಠ ಮಟ್ಟದಲ್ಲಿರುವ ರಾಜ್ಯಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಹಿಮಾಚಲ ಪ್ರದೇಶದಲ್ಲಿ ಶೇಕಡ 50 ಮಹಿಳೆಯರು ಲಸಿಕೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಗರಿಷ್ಠ ಮಟ್ಟದ (ಶೇ.38) ಲಸಿಕೆ ಅಭಿಯಾನ ಮುಗಿಸಿರುವ ರಾಜ್ಯ ಇದು. ಇಲ್ಲಿ 1,000 ಪುರುಷರಿಗೆ 906 ಮಹಿಳೆಯರೆಂಬ ಲಿಂಗಾನುಪಾತ ಇದ್ದಾಗ್ಯೂ ಶೇಕಡ 48 ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಗಳನ್ನು ತೆಗೆದುಕೊಂಡರೆ ಅಲ್ಲಿ ಲಸಿಕೆ ಅಭಿಯಾನದ ಪ್ರಮಾಣ ಬಹಳ ಕಡಿಮೆ. ಉತ್ತರ ಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 12 ಜನರಿಗಷ್ಟೇ ಲಸಿಕೆ ಸಿಕ್ಕಿದೆ. ಇಲ್ಲಿ 1,000 ಪುರುಷರಿಗೆ 936 ಮಹಿಳೆಯರೆಂಬ ಲಿಂಗಾನುಪಾತವಿದೆ. ಇಲ್ಲಿ 1,000ಕ್ಕೆ 746 ಮಹಿಳೆಯರಷ್ಟೇ ಲಸಿಕೆ ಪಡೆದಿದ್ದಾರೆ. ಇದೇ ರೀತಿ ಬಿಹಾರದಲ್ಲಿ ಶೇಕಡ 13 ಜನರಿಗೆ ಲಸಿಕೆ ಸಿಕ್ಕಿದೆ. ಲಿಂಗಾನುಪಾತ 1000 ಪುರುಷರಿಗೆ 923 ಮಹಿಳೆಯರೆಂಬಂತಿದೆ. ಲಸಿಕೆ ಪಡೆದ ಮಹಿಳೆಯರ ಸಂಖ್ಯೆ 1,000ಕ್ಕೆ 810 ಮಾತ್ರ.