

ಕೋಲಾರ: ಜಮೀನು ಹದ್ದ ಬಸ್ತಿಗಾಗಿ ಅರ್ಜಿ ಸಲ್ಲಿಸಿ ಸುಮಾರು ದಿನಗಳೇ ಕಳೆದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆ ತಹಶೀಲ್ದಾರ್ ಎದುರು ಕಣ್ಣೀರು ಹಾಕಿದ ಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಚೊಕ್ಕಪುರ ಗ್ರಾಮದ ಮಹಿಳೆ ವರಲಕ್ಷಿ$್ಮ ಜಮೀನು ಹದ್ದುಬಸ್ತಿಗಾಗಿ ತಾಲೂಕು ಕಚೇರಿಗೆ ಅರ್ಜಿಸಲ್ಲಿ ಹಲವು ವರ್ಷಗಳೆ ಕಳೆದಿವೆ. ಅಂದಿನಿಂದ ಇಂದಿವರೆಗೂ ಅಧಿಕಾರಿಗಳು ವಿಕಾರಣ ಹೇಳಿಕೊಂಡು ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಹಶೀಲ್ದಾರ್ ಅವರನ್ನು ಕೇಳಿದಾಗ ಶ್ರಿದಲ್ಲೇ ಕೆಲಸ ಮುಗಿಸಲಾಗುವುದು ಎಂದು ಎಂದು ಹೇಳುತ್ತಾರೆ. ಈಗಿನ ತಹಶೀಲ್ದಾರ್ ಹರ್ಷವರ್ಧನ್ ಅವರ ಗಮನಕ್ಕೂ ತರಲಾಗಿದೆ. ಆದರೆ ಕೆಲಸ ಆಗಿಲ್ಲ, ತನ್ನ ಒಂದು ಎಕರೆ ಭೂಮಿಯ ಹದ್ದುಬಸ್ತು ಮಾಡಿಕೊಟ್ಟಿಲ್ಲ ಎಂದು ಹಲವು ವರ್ಷಗಳಿಂದ ಕಚೇರಿ ಅಲೆದಾಡಿದರು ಕೆಲಸ ಆಗಿಲ್ಲ, ಹದ್ದುಬಸ್ತು ಗುರುತಿಸಿಕೊಡದೆ ಇರುವುದರಿಂದ ಅಕ್ಕಪಕ್ಕದವರಿಂದ ಕಿರುಕುಳ ಶುರುವಾಗಿದೆ. ಇನ್ನಾದರು ಕೆಲಸ ಮಾಡಿಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೆನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಮೀನಿಗೆ ಕಾಂಪೌಂಡ್ ಹಾಕಲು ಬಿಡದೆ ಅಕ್ಕಪಕ್ಕದವರು ತೊಂದರೆ ಕೊಡುತ್ತಿದ್ದಾರೆ. ಕಳೆದ ತಿಂಗಳೇ ಸರ್ವೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ತಹಶೀಲ್ದಾರ್ ಇದುವರೆಗೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ, ಈ ಕಚೇರಿಯಲ್ಲಿ ಬಡವರ ಕೆಲಸಗಳು ಸುಲಭವಾಗಿ ಆಗುವುದಿಲ್ಲ. ಸ್ಥಿತಿವಂತರ ಕೆಲಸಗಳು ಕ್ಷಣಗಳಲ್ಲಿ ಆಗುತ್ತವೆ. ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾನವೀಯತೆಯಿಲ್ಲ ಎಂದು ಆರೊಪಿಸಿದರು.
ಜಮೀನಿಗೆ ಕಾಪೌಂಡ್ ನಿರ್ಮಾಣ ಮಾಡಲು ಪಕ್ಕದ ಜಮೀನಿನವರು ಅಡ್ಡಿಪಡಿಸಿದ್ದಾರೆ, ನಮ್ಮನ್ನು ಹೊಡೆದು ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರು ನ್ಯಾಯ ಸಿಕ್ಕಿಲ್ಲ. ಜಮೀನಿನಲ್ಲಿ ಏನೇ ಕೆಲಸ ಮಾಡಿದರು ಬಂಧಿಸಲಾಗುವುದು ಎಂದು ತಹಶೀಲ್ದಾರ್ ಬೆದರಿಕೆ ಹಾಕುತ್ತಾರೆ, ನಮ್ಮನ್ನ ಬಂಧಿಸಕ್ಕೆ ನಾವೇನಾದರು ಕೊಲೆ ಮಾಡಿದೀವ ಎಂದು ಅಕ್ರೋಶವ್ಯಕ್ತಪಡಿಸಿದರು.
ಜನವರಿ 4ರಂದು ಸಮಸ್ಯೆ ಬಗೆಹರಿಸುವುದಾಗಿ ತರಹಶೀಲ್ದಾರ್ ಹರ್ಷ ವಷರ್ಧನ್ ಭರವಸೆ ನೀಡಿದರು, ಇದಕ್ಕೆ ಪ್ರಕ್ರಿಯಿಸಿದೆ ಮಹಿಳೆ ವರಲಕ್ಷಿ$್ಮ ಜನವರಿ 4 ರಂದು ಕೆಲಸ ಆಗದಿದ್ದರೆ ತಾಲೂಕು ಕಚೇರಿ ಆವರಣದಲ್ಲೇ ಬಂದು ಸಾಯುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.