

ಬೆಂಗಳೂರು: ಮಹಿಳೆಯೊಬ್ಬರು ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿ ಗೂಡ್ಸ್ ರೈಲು ಬಂದಿದ್ದು, ಗಾಬರಿ ನಡುವೆಯೂ ಸಮಯಪ್ರಜ್ಞೆಯಿಂದ ಉದ್ದವಾಗಿ ಹಳಿ ಮೇಲೆ ಮಲಗಿ ಮಹಿಳೆ ಪ್ರಾಣ ರಕ್ಷಿಸಿಕೊಂಡ ಅಚ್ಚರಿಯ ಪ್ರಕರಣ ರಾಜಾನುಕುಂಟೆ ಬಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರಾಜಾನುಕುಂಟೆ ಬಳಿ ರೈಲ್ವೆ ನಿಲ್ದಾಣದ ಬಳಿ ಮಹಿಳೆಯೊಬ್ಬರು ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಗೂಡ್ಸ್ ರೈಲು ಬಂದಿದೆ. ತಕ್ಷಣ ಮಹಿಳೆ ಹಳಿಯಲ್ಲಿ ಮಲಗಿ ಜೀವ ಉಳಿಸಿಕೊಂಡಿದ್ದಾರೆ. ರೈಲು ಹೋದ ಬಳಿಕ ನಿಧಾನವಾಗಿ ಎದ್ದು ಬಂದಿದ್ದಾರೆ. ನಂತರ ಮಹಿಳೆಯ ಸಂಬಂಧಿಕರು ಆಕೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ರೈಲ್ವೆ ಹಳಿ ಮೇಲೆ ಮಲಗಿ ಮಹಿಳೆ ಪ್ರಾಣ ಉಳಿಸಿಕೊಂಡಿರುವ ದೃಶ್ಯವನ್ನು ಸ್ಥಳದಲ್ಲಿದವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.