

ಚಿತ್ರದುರ್ಗ: ರಾಜ್ಯದಲ್ಲಿ ಒಂದೊಂದೇ ಜಿಲ್ಲೆಗಳಿಗೆ ಕಾಲಿಡುತ್ತಿರುವ ಕರೊನಾ ವೈರಸ್ ಸದ್ಯ ಕೋಟೆ ನಾಡು ಚಿತ್ರದುರ್ಗಕ್ಕೂ ಎಂಟ್ರಿಕೊಟ್ಟಿದೆ. ವಿದೇಶದಿಂದ ಬಂದಿದ್ದ ಮಹಿಳೆಯೋರ್ವರಿಗೆ ಕರೊನಾ ದೃಢಪಟ್ಟಿದೆ.
ಮಹಿಳೆಯೊಂದಿಗೆ ವಿದೇಶದಿಂದ ಆರು ಮಂದಿ ಬಂದಿದ್ದರು. ಸದ್ಯ ಅವರೆಲ್ಲರ ರಕ್ತದ ಮಾದರಿಯನ್ನೂ ತಪಾಸಣೆಗೆ ಕಳಿಸಲಾಗಿದ್ದು, ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕರೊನಾ ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿ ಬರಬೇಕಿದೆ.
ಮಹಿಳೆಯನ್ನು ಮನೆಯಲ್ಲೇ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಮನೆಯ ಸುತ್ತ 5ಕಿಮೀ ಅಂತರವನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಮನೆಯಿಂದ ಯಾರೂ ಹೊರಬರುವಂತಿಲ್ಲ. ರೆಡ್ ಝೋನ್ ಒಳಗೂ ಯಾರೂ ಹೋಗುವಂತಿಲ್ಲ.
ಸೋಂಕಿತ ಮಹಿಳೆಯೊಂದಿಗೆ ಮಕ್ಕಳೂ ಕೂಡ ಇದ್ದರು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. (ದಿಗ್ವಿಜಯ ನ್ಯೂಸ್)