ಹಾಸನದಲ್ಲಿ ತಡರಾತ್ರಿ ವಕೀಲನ ಮನೆ ಮುಂದೆ ವೈದ್ಯನಿಂದ ವಾಮಾಚಾರ! ವಿಡಿಯೋ ವೈರಲ್​

Witchcraft in front of a lawyers house in hassan
Published on

ಹಾಸನ: ವಕೀಲನ ಮನೆ ಮುಂದೆ ವೈದ್ಯರೊಬ್ಬರು ವಾಮಾಚಾರ ನಡೆಸಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಗರದಲ್ಲಿ ನಡೆದಿದೆ.

ಮಧ್ಯರಾತ್ರಿ ಸ್ಕೂಟರ್​ನಲ್ಲಿ ವಕೀಲ ದೇವರಾಜೇಗೌಡರ ಮನೆ ಬಾಗಿಲ ಬಳಿ ಬಂದ ಹಾಸನ ಹಿಮ್ಸ್ ವೈದ್ಯ ಡಾ. ಸುರೇಶ್, ಕುಡಿಕೆ ಮತ್ತು ಕೋಳಿಯ ಮಾಂಸ, ಕಾಲುಗಳನ್ನ ಎಸೆದು ಹೋಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, 'ನನ್ನ ಮನೆಗೆ ವೈದ್ಯ ವಾಮಾಚಾರ ಮಾಡಿದ್ದಾರೆ' ಎಂದು ಆರೋಪಿಸಿ ಡಾ. ಸುರೇಶ್ ವಿರುದ್ಧ ಹಾಸನ ಬಡಾವಣೆ ಪೊಲೀಸ್​ ಠಾಣೆಯಲ್ಲಿ ವಕೀಲರು ಎಫ್​ಐಆರ್​ ದಾಖಲಿಸಿದ್ದಾರೆ.

ವಕೀಲ‌ ದೇವರಾಜೇಗೌಡ‌ ಮನೆ ಸಮೀಪ‌ ಡಾ.ಸುರೇಶ್ ಅವರ ತಂದೆ ರಾಮೇಗೌಡರ ಹೆಸರಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ. ಡಾ.ಸುರೇಶ್​ರ ಅಕ್ರಮ ಕಟ್ಟಡದ ವಿರುದ್ಧ ದೂರು ದಾಖಲಿಸಿ ವಕೀಲ ದೇವರಾಜೇಗೌಡ ಹೋರಾಟ ನಡೆಸಿದ್ದರು. ಪರಿಣಾಮ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಾಸನ ನಗರಸಭೆಯು ಅಂತಿಮ ತಿಳಿವಳಿಕೆ ಪತ್ರ ನೀಡಿತ್ತು. ಇದೀಗ ಈ ಪ್ರಕರಣ ಮಾಟ-ಮಂತ್ರ ರೂಪಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಭಾರೀ ಚರ್ಚೆಯಾಗುತ್ತಿದೆ.(ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net