ರೈಲ್ವೆ ಹಳಿಯ ಬಳಿ ಮರಿಗೆ ಜನ್ಮ ನೀಡಿದ ಕಾಡಾನೆ, 2 ಗಂಟೆ ಕಾಲ ರೈಲು ನಿಲ್ಲಿಸಿ ಮಾನವೀಯತೆ ಮೆರೆದ ಚಾಲಕ! Harmonious

Harmonious
Published on

Harmonious: ಆನೆಯೊಂದು ಹಳಿಗಳ ಮೇಲೆ ಹೆರಿಗೆ ನೋವು ಅನುಭವಿಸುತ್ತಿರುವಾಗ ರೈಲು ಚಾಲಕನೊಬ್ಬ ಸುಮಾರು ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿದ ಹೃದಯಸ್ಪರ್ಶಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಮರಿಗೆ ಜನ್ಮ ನೀಡಿದ ನಂತರ ತಾಯಿ ಆನೆ ಮತ್ತು ಮರಿ ಶಾಂತಿಯುತವಾಗಿ ಕಾಡಿಗೆ ನಡೆದುಕೊಂಡು ಹೋದ ಬಳಿಕ ರೈಲನ್ನು ಚಾಲಕ ಪ್ರಾರಂಭಿಸಿದ್ದಾನೆ ಎಂದು ವರದಿ ತಿಳಿಸಿದೆ. ಈ ಅಪರೂಪದ ಮತ್ತು ಹೃದಯಸ್ಪರ್ಶಿ ಕ್ಷಣದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಸದ್ಯಕ್ಕೆ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು X ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಮಾನವರು ಮತ್ತು ವನ್ಯಜೀವಿಗಳ ನಡುವಿನ ಸಹಬಾಳ್ವೆಯ ಸಾಧ್ಯತೆಗೆ ಸಾಕ್ಷಿಯಾಗಿ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ.

"ಮಾನವ-ಪ್ರಾಣಿ ಸಂಘರ್ಷದ ಸುದ್ದಿಗಳನ್ನು ಮೀರಿ, ಮಾನವ-ಪ್ರಾಣಿಗಳ ಸಾಮರಸ್ಯದ ಅಸ್ತಿತ್ವದ ಈ ಉದಾಹರಣೆಯನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಜಾರ್ಖಂಡ್‌ನಲ್ಲಿ ಒಂದು ರೈಲು ಎರಡು ಗಂಟೆಗಳ ಕಾಲ ಕಾಯುತ್ತಿತ್ತು, ಆನೆಯೊಂದು ತನ್ನ ಮರಿಗೆ ಜನ್ಮ ನೀಡಿತು. ನಂತರ ಇಬ್ಬರೂ ಹೇಗೆ ಸಂತೋಷದಿಂದ ನಡೆದರು ಎಂಬುದನ್ನು ವಿಡಿಯೋ ತೋರಿಸುತ್ತದೆ" ಎಂದು ಅವರು X ನಲ್ಲಿ ಬರೆದಿದ್ದಾರೆ. (ಏಜೆನ್ಸೀಸ್​)

̤̤̤̤̤̤̤̤̤̤̤̤̤̤̤̤̤̤̤̤̤

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net