ಥೂ, ಇವನೆಂಥಾ ಕ್ರೂರಿ? ಮಗುವಿಗೆ ಹಾಲುಣಿಸುತ್ತಿರುವಾಗಲೇ ಪತ್ನಿಯ ಕತ್ತು ಕೊಯ್ದು ಕೊಂದೇ ಬಿಟ್ಟ

New Project (10)
Published on

ಕಲಬುರಗಿ: ಇಲ್ಲೊಬ್ಬ ಕಿರಾತಕ ಮಗುವಿಗೆ ಹಾಲು ಕುಡಿಸುತ್ತಿರುವಾಗಲೇ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಇಂತಹ ಅಮಾನುಷ ಘಟನೆ ಕಲಬುರಗಿಯ ರಾಘವೇಂದ್ರ ಕಾಲನಿಯಲ್ಲಿ ಸಂಭವಿಸಿದೆ. ನಸೀಮಾ ಬೇಗಂ (35) ಮೃತ ದುರ್ದೈವಿ. ಈಕೆಯ ಗಂಡ ಇಬ್ರಾಹಿಂ ಕೊಲೆ ಆರೋಪಿ.

ಕುಡಿತದ ಚಟ ಅಂಟಿಸಿಕೊಂಡಿದ್ದ ಇಬ್ರಾಹಿಂ, ಹಣಕ್ಕಾಗಿ ಪತ್ನಿಯನ್ನ ನಿತ್ಯ ಪೀಡಿಸುತ್ತಿದ್ದನಂತೆ. ತವರು ಮನೆಯಿಂದ ಹಣ ತರುವಂತೆ ಕಿರುಕುಳ ಕೊಡುತ್ತಿದ್ದನಂತೆ. ತವರು ಮನೆಯಿಂದ ದುಡ್ಡು ತರದ ಹಿನ್ನೆಲೆಯಲ್ಲಿ ಪತ್ನಿಯನ್ನು ಮಗುವಿಗೆ ಹಾಲು ಕುಡಿಸುವಾಗಲೇ ಹತ್ಯೆ ಮಾಡಿದ್ದಾನೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net