ವಾಲ್ ಸ್ಟ್ರೀಟ್​ನಲ್ಲಿ ಮದುವೆ ದಿಬ್ಬಣ

6-68389f6fa47ce
Published on

ನ್ಯೂಯಾರ್ಕ್: ಸುಮಾರು 400 ಜನರು ನರ್ತಿಸುತ್ತಾ ಭಾರತೀಯ ಮದುಮಗನ ಸಾಂಪ್ರದಾಯಿಕ ಮೆರವಣಿಗೆ ಅಮೆರಿಕದ ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟ್ ರಸ್ತೆ ಸಾಕ್ಷಿಯಾಗಿದ್ದು ಅದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭವ್ಯ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟ ಜನರ ಗುಂಪು ಡಿಜೆ ಸಂಗೀತಕ್ಕೆ ನರ್ತಿಸುತ್ತಾ ಸಾಗಿದಾಗ ನ್ಯೂಯಾರ್ಕ್​ನ ಹಣಕಾಸು ಜಿಲ್ಲೆಯ ಐಕಾನಿಕ್ ರಸ್ತೆ ತಾತ್ಕಾಲಿಕವಾಗಿ ಪೂರ್ಣ ಪ್ರಮಾಣದ ಭಾರತೀಯ ಮದುವೆ ಮೆರವಣಿಗೆಯ ತಾಣವಾಗಿ ಭಾಸವಾಯಿತು. ‘400 ಜನರ ಬಾರಾತ್​ಗಾಗಿ ನಾವು ವಾಲ್ ಸ್ಟ್ರೀಟ್​ಅನ್ನು ಮುಚ್ಚಿಯೇ ಬಿಟ್ಟಿದ್ದೆವು. ಇದನ್ನು ಯಾರಾದರೂ ಯೋಚಿಸಿದ್ದರೇ?’ ಎಂದು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಡಿಜೆ ಎಜೆಯೊಬ್ಬರು ಬರೆದಿದ್ದಾರೆ. ‘ಇದು ಜೀವಮಾನದಲ್ಲಿ ಒಮ್ಮೆ ಕಾಣುವಂಥ ಮ್ಯಾಜಿಕ್ ಆಗಿದೆ’ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net