ಅಧಿವೇಶನ ನಡೆಯುವ ವೇಳೆ ವಿಧಾನಸೌಧದಲ್ಲಿ ಬಿಯರ್​ ಬಾಟಲಿ​ಗಳು ಪತ್ತೆ!

Vidhan Soudha 9 June 20
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಅಧಿವೇಶನ ನಿನ್ನೆ(ಸೋಮವಾರ) ಆರಂಭವಾಗಿದೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ವಿಧಾನಸೌಧದ ಎರಡನೇ ಮಹಡಿ 209 ರೂಂ ಬಳಿ ಬಿಯರ್​ ಬಾಟಲಿಗಳು ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಕುಡಿಯುವ ನೀರಿನ ಫಿಲ್ಟರ್​ ಇರುವ ಬಳಿಯೇ ಎರಡು ಬಾಟಲಿಗಳು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೂ ಗ್ರಾಸವಾಗಿದೆ.

ಯಾರು? ಯಾವ ಉದ್ದೇಶಕ್ಕೆ? ಈ ಬಾಟಲಿ​ಗಳನ್ನು ತಂದಿದ್ದರು? ವಿಧಾನಸೌಧದಲ್ಲಿಯೇ ಬಿಯರ್​ ಕುಡಿದಿದ್ದಾರೆಯೇ? ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಯಾರು ತಪ್ಪಿತಸ್ಥರು ಎನ್ನುವುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net