VIDEO | ಮೈಗೆ ಎಣ್ಣೆ ಹಚ್ಚಿಸಿಕೊಂಡ ಕೋಣ!; ಆರೈಕೆ ಹೇಗೆ? ಮಾಲೀಕರ ಮಾತನ್ನು ನೀವು ಒಮ್ಮೆ ಕೇಳಿ..

Untitled design (53)
Published on: 

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಕಂಬಳಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬರೋಬ್ಬರಿ 200ಕ್ಕೂ ಹೆಚ್ಚು ಕೋಣಗಳು ಈ ಉತ್ಸವದಲ್ಲಿ ಭಾಗಿಯಾಗಿದೆ. ಎರಡರಿಂದ ಮೂರು ಚಾಟಿ ಏಟಿನ ಮೂಲಕ ಕೋಣಗಳನ್ನು ಕಣಕ್ಕಿಳಿಸುವ ಮಾಲೀಕರು ಅದರ ಆರೈಕೆ ಹೇಗೆ ಮಾಡುತ್ತಾರೆ? ಎಂಬುದರ ಕುರಿತು ಇಲ್ಲೊಬ್ಬ ಮಾಲೀಕರು ಹೇಳಿರುವುದನ್ನು ನೀವು ಒಮ್ಮೆ ಆಲಿಸಿ....

ಮಂಗಳೂರಿನ ಜಪ್ಪು ಕಂಬಳದಿಂದ ಬಂದ ಮಾಲೀಕರೊಬ್ಬರು ಮಾತನಾಡಿ, ಕೋಣವನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸಬೇಕು, ಎಣ್ಣೆ ಹಚ್ಚಬೇಕು, ಓಡಾಡಿಸಬೇಕು. ಚಾಟಿ ಏಟು ಕೊಡ್ತೀವಿ ಅನ್ನುವುದಕ್ಕಿಂತ ಅದನ್ನು ನಾವು ಮಗುವಿನಂತೆ ನೋಡಿಕೊಳ್ತೇವೆ, ತಿನ್ನಲು ಉರುಳಿ ಇತರೆ ಆಹಾರ ಪದಾರ್ಥಗಳನ್ನು ಕೊಟ್ಟು ಚೆನ್ನಾಗಿ ಆರೈಕೆ ಮಾಡುತ್ತೇವೆ ಎಂದರು.

ಸ್ಥಳ ಮತ್ತು ಆಹಾರ ಬದಲಾವಣೆಯಾದರೆ ವ್ಯತ್ಯಾಸವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಸಿ ನೀರಿನಿಂದ ಸ್ನಾನ ಮಾಡಿಸಿ, ಎಲ್ಲಾ ವ್ಯವಸ್ಥೆಯನ್ನು ಮಾಡಿರುತ್ತೇವೆ. ಹಾಗಾಗಿ ಆ ರೀತಿಯ ಸಮಸ್ಯೆ ಇರುವುದಿಲ್ಲ. ಕೋಣ ಓಟಕ್ಕೆ ಕೂಡ ಸಿದ್ಧವಾಗಿದೆ ಎಂದು ಹೇಳಿದರು. ಕೋಣದ ಆರೈಕೆ ಕುರಿತಂತೆ ಮತ್ತಷ್ಟು ಸಂಗತಿಗಳ ತಿಳಿಯಲು ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.