ಪಿ.ನಟರಾಜು ನೇತೃತ್ವದ ಬಣಕ್ಕೆ ಭರ್ಜರಿ ಜಯ

09 mar tnp 01
ತಿ.ನರಸೀಪುರ ಪಟ್ಟಣದ ಹೆಳವರಹುಂಡಿ ಆಲಗೂಡು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪಿ.ನಟರಾಜು ಬಣದ ಸದಸ್ಯರು ಗೆಲುವು ಸಾಧಿಸಿದರು. ಎಂ.ಕೆ.ಸಹದೇವ, ಹೆಚ್.ಬಿ. ಚಿಕ್ಕನಂಜಯ್ಯ, ನಾಗಣ್ಣ, ಶಿವಣ್ಣ, ಮಹದೇವಮ್ಮ, ಕಾಂತಮ್ಮ, ಹೆಚ್.ಮರಿಸ್ವಾಮಿ, ಜಯಣ್ಣ, ಎಚ್.ಸಿ.ಅರುಣ್ ಕುಮಾರ್ ಇದ್ದರು.
Published on

ಆಲಗೂಡು ಪ್ಯಾಕ್ಸ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ

ತಿ.ನರಸೀಪುರ : ಪ್ರತಿಷ್ಠೆಯ ಕಣವಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಆಲಗೂಡು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ 10 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಪಿ.ನಟರಾಜು ನೇತೃತ್ವದ ಬಣ ಭರ್ಜರಿ ಜಯಗಳಿಸಿದ್ದು, ನಿಕಟಪೂರ್ವ ಅಧ್ಯಕ್ಷ ಬಿ.ವೀರಭದ್ರಪ್ಪ ಹಾಗೂ ಧರ್ಮಯ್ಯನಹುಂಡಿ ಮಲ್ಲಣ್ಣ ನೇತೃತ್ವದ ಬಣಕ್ಕೆ ತೀವ್ರ ಮುಖಭಂಗವಾಗಿದೆ.

ಪಟ್ಟಣದ ಹೆಳವರಹುಂಡಿಯಲ್ಲಿರುವ ಸಹಕಾರ ಸಂಘದಲ್ಲಿ ಮಾಜಿ ಅಧ್ಯಕ್ಷ ಪಿ.ನಟರಾಜು ಬಣದಿಂದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದ 10 ಸದಸ್ಯರು (ಅವಿರೋಧ ಆಯ್ಕೆ ಅಭ್ಯರ್ಥಿ ಸೇರಿ)ಗೆಲುವು ಸಾಧಿಸಿದರೆ, ಬಿ.ವೀರಭದ್ರಪ್ಪ ಹಾಗೂ ಮಲ್ಲಣ್ಣ ಬಣದಿಂದ ಕಣದಲ್ಲಿದ್ದ ಅಭ್ಯರ್ಥಿಗಳೆಲ್ಲರೂ ಸೋಲನುಭವಿಸಿದ್ದು, ತಂಡದ ನಾಯಕರು ಮಾತ್ರ ಜಯಗಳಿಸಿದರು.

ಸಾಲಗಾರರ ಕ್ಷೇತ್ರದಿಂದ ನಿರ್ದೇಶಕ ಸ್ಥಾನ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದ್ದ ಪಿ.ನಟರಾಜು (340),ನಾಗಣ್ಣ(278), ಮಹದೇವ(219),ಶಿವಣ್ಣ(212),ಮಹದೇವಮ್ಮ(254),ಕಾಂತಮ್ಮ(213),ಎಚ್.ಮರಿಸ್ವಾಮಿ (236) ಜಯಣ್ಣ(144) ಮತ ಪಡೆದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಹೆಳವರಹುಂಡಿ ಸಹದೇವ 154 ಮತ ಪಡೆದು ಜಯಗಳಿಸಿದರು. ಇನ್ನುಳಿದಂತೆ ಬಣದ ನಾಯಕತ್ವ ವಹಿಸಿದ್ದ ಬಿ.ವೀರಭದ್ರಪ್ಪ (230) ಹಾಗೂ ಮಲ್ಲಣ್ಣ(256) ಮತ ಪಡೆದು ತಮ್ಮ ತಂಡದಿಂದ ಜಯಗಳಿಸಿದರು.ಆ ಲಗೂಡು ಕ್ಷೇತ್ರದಿಂದ ನಂಜುಂಡ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿ ಹಸೀನಾ ಚುನಾವಣೆ ಪ್ರಕ್ರಿಯೆ ನಡೆಸಿದರು. ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸಹಕಾರ ಸಂಘದ ಮುಂದೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಾಲಗಾರರಲ್ಲದ ಕ್ಷೇತ್ರದಿಂದ ಗೆಲುವು ಸಾಧಿಸಿದ ಎಂ.ಕೆ.ಸಹದೇವ ಮಾತನಾಡಿ, ಸಹಕಾರ ಸಂಘದಿಂದ ರೈತರಿಗೆ ದೊರಕಬಹುದಾದ ಎಲ್ಲ ಸವಲತ್ತುಗಳನ್ನು ರೈತರಿಗೆ ನೇರವಾಗಿ ತಲುಪಿಸಲಾಗುತ್ತದೆ.ನಮ್ಮ ತಂಡದ ನಾಯಕರಾದ ಪಿ.ನಟರಾಜುರವರು ಅಭಿವೃದ್ಧಿ ಕಾರ್ಯದಲ್ಲಿ ತೆಗೆದು ಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ. ಮತದಾರರು ನಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಅವರ ಆಶಯಕ್ಕೆ ತಕ್ಕಂತೆ ಎಲ್ಲಾರೂ ಕೆಲಸ ಮಾಡುತ್ತೇವೆ ಎಂದರು.

ಪುರಸಭಾ ಸದಸ್ಯರಾದ ಬಾದಾಮಿ ಮಂಜು, ಎಸ್.ಕೆ.ಕಿರಣ್, ಗ್ರಾ.ಪಂ ಮಾಜಿ ಅಧ್ಯಕ್ಷ ಬನ್ನಳ್ಳಿಹುಂಡಿ ಶಿವಕುಮಾರ್, ತಾ.ಪಂ.ಮಾಜಿ ಸದಸ್ಯ ಎಂ.ರಮೇಶ್, ಅಮಾಸೆಗೌಡ, ಗಣೇಶ್, ವಕೀಲ ಪರಮೇಶ್, ದಸಂಸ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಮುಖಂಡರಾದ

ಅಲಗೂಡು ನಾಗಣ್ಣ, ರಾಚಪ್ಪ, ಮುದ್ದಬೀರನ ಹುಂಡಿ ಗುರುಸ್ವಾಮಿ , ವೃಷಭೇಂದ್ರ, ಕಿಶೋರ್ ಕುಮಾರ್, ಮಂಜು, ಎಚ್.ಬಿ.ಚಿಕ್ಕನಂಜಯ್ಯ, ಅರುಣ್ ಕುಮಾರ್, ಸ್ಟಾರ್ ಮಲ್ಲೇಶ್ , ಸುರೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net