ಗುಂಡೇಟಿನಿಂದ ಯೋಧನ ಜೀವ ಬದುಕಿಸಿತು ಐಫೋನ್​!

Iphone
Published on

ಕೀವ್​: ಯುದ್ಧದಲ್ಲಿ ತೊಡಗಿದ್ದ ಯೋಧನಿಗೆ ಐಫೋನ್​ ಮರುಜೀವ ನೀಡಿದೆ. ಹೌದು ತನ್ನ ಜೇಬಿನಲ್ಲಿದ್ದ ಐಫೋನ್​ ಇದೀಗ ಯೋಧನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

ರಷ್ಯಾ ಹಾಗೂ ಯೂಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಳೆದ ಫೆಬ್ರವರಿಯಿಂದಲೂ ಈ ದೇಶದ ಭೀಕರ ಯುದ್ಧ ನಡೆಯುತ್ತಿದ್ದು, ಸದ್ಯ ನಿಲ್ಲುವ ಲಕ್ಷಣವೇನೂ ಕಾಣುತ್ತಿಲ್ಲ. ಈ ನಡುವೆ ಸೈನಿಕರ ಹೋರಾಟವೂ ಮುಂದುವರಿದಿದೆ. ಹೀಗೆ ಯುದ್ಧದಲ್ಲಿ ತೊಡಗಿದ್ದ ಯೋಧನಿಗೆ ನೆರವಾಗಿದ್ದು ಮಾತ್ರ ಐಫೋನ್​.

ಶತ್ರು ದೇಶದ ಸೈನಿಕರೊಂದಿಗೆ ಯುದ್ಧದಲ್ಲಿ ತೊಡಗಿದ್ದ ಯೂಕ್ರೇನ್​ ಸೈನಿಕನ ಎದೆಗೆ ನೇರವಾಗಿ ಗುಂಡೇಟು ಬಂದು ತಲುಪಿದೆ. ಆದರೂ ಯೋಧ ಬದುಕಿದ್ದಾನೆ, ಇದಕ್ಕೆ ಕಾರಣ ಐಫೋನ್​ 11ಪ್ರೊ. ಹೌದು.. ಗುಂಡೇಟಿಗೆ ಐಫೋನ್​ ಛಿದ್ರವಾಗಿದೆ ಹೊರತು ಸೈನಿಕನ ದೇಹಕ್ಕೆ ಹಾನಿಯಾಗಿಲ್ಲ. ಸದ್ಯ ಈ ಐಫೋನ್​ ಛಿದ್ರವಾಗಿರುವ ವಿಡಿಯೋ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net