ರಷ್ಯಾ ಪಡೆಯ ದಾಳಿ ನಿಲ್ಲಿಸುವಂತೆ ಯೂಕ್ರೇನ್​ ಅರ್ಜಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

New Project(10)
Published on

ನವದೆಹಲಿ: ರಷ್ಯಾ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಯೂಕ್ರೇನ್​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಆರಂಭವಾಗಿದೆ.

ನೆದರ್​ಲ್ಯಾಂಡ್​ನ ಹೇಗ್​ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನನ್ನ ದೇಶದ ಜನರನ್ನು ರಷ್ಯಾ ಸೇನೆ ಕೊಲ್ಲುತ್ತಿದೆ. ವೈದ್ಯಕೀಯ ಸೌಲಭ್ಯಗಳ ಮೇಲೂ ದಾಳಿ ಮಾಡುತ್ತಿದೆ. ನನ್ನ ದೇಶ ಅಕ್ಷರಶಃ ಸ್ಮಶಾನವಾಗಿದೆ. ಶಾಂತಿಗೆ ಯೂಕ್ರೇನ್​ ಸಿದ್ಧವಿದೆ. ರಷ್ಯಾ ಸೇನಾಪಡೆ ಯುದ್ಧ ನಿಲ್ಲಿಸಬೇಕು ಎಂದು ಯೂಕ್ರೇನ್​ ಪರ ವಕೀಲ ವಾದ ಮಂಡಿಸುತ್ತಿದ್ದಾರೆ. ನ್ಯಾಯಾಲಯ ಏನು ತೀರ್ಪು ಕೊಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

ರಷ್ಯಾ ವಶಕ್ಕೆ ಪಡೆದಿದ್ದ ಚುಹೀವ್​ ನಗರವನ್ನು ಯೂಕ್ರೇನ್​ ಮತ್ತೆ ತನ್ನ ವಶಕ್ಕೆ ಪಡೆದಿದೆ. ಜತೆ ರಷ್ಯಾದ ಇಬ್ಬರು ಹಿರಿಯ ಮಾಂಡರ್​ಗಳನ್ನು ಹತ್ಯೆ ಮಾಡಲಾಗಿದೆ. ಸತತ 12 ದಿನಗಳಿಂದ ನಡೆಯುತ್ತಿರುವ ರಣಭೀಕರ ಯುದ್ಧದ ಪರಿಣಾಮ ಯೂಕ್ರೇನ್​ ಅಕ್ಷರಶಃ ಸ್ಮಶಾನವಾಗಿದೆ. ರಷ್ಯಾ ದಾಳಿ ನಡೆಸಿದ ಸ್ಥಳದಲ್ಲೇ ನಿಂತು ಯೂಕ್ರೇನ್​ ಸೈನಿಕರು ರಾಷ್ಟ್ರಗೀತೆಯನ್ನು ಹಾಡಿ ರಷ್ಯಾಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಬಾಂಬ್​ ಬಿದ್ದ ಸ್ಥಳದಲ್ಲೇ ಯೂಕ್ರೇನ್​ ಸೈನಿಕರ ರಣೋತ್ಸಾಹದ ವಿಡಿಯೋ ವೈರಲ್​ ಆಗಿದೆ. ಅತ್ತ ಸೈಲೆಂಟ್​ ಹಾಗೇ ಯೂಕ್ರೇನ್​ ಸೇನೆ ರಷ್ಯಾಗೆ ಠಕ್ಕರ್​ ಕೊಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net