ಮುಂದೆ ಚಲಿಸುತ್ತಿದ್ದ ಅಪರಿಚಿತ ವಾಹನಕ್ಕೆ ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು

Bike Accident_2
Published on

ಬೆಂಗಳೂರು: ಮುಂದೆ ಚಲಿಸುತ್ತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ದೊಡ್ಡಬೆಲೆ ಕಾಲನಿ ಪ್ರಸಾದ್ ಅಲಿಯಾಸ್ ಪ್ರಶಾಂತ್ (22) ಮೃತ. ಪೇಂಟಿಂಗ್, ಕಾರ್ಪೆಂಟರ್ ಆಗಿದ್ದ ಪ್ರಸಾದ್, ಮಂಗಳವಾರ ರಾತ್ರಿ 9.15ರಲ್ಲಿ ಸ್ಕೂಟರ್‌ನಲ್ಲಿ ಸ್ನೇಹಿತನ ಮನೆಗೆ ಹೋಗುತ್ತಿದ್ದ. ನೈಸ್ ರಸ್ತೆ ಮಾಗನಹಳ್ಳಿ ಬ್ರಿಡ್ಜ್ ಬಳಿ ಅತಿವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ, ಮುಂದೆ ಸಾಗುತ್ತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದ್ದ.

ಅರ್ಧ ಹೆಲ್ಮೆಟ್ ಧರಿಸಿದ್ದ ಕಾರಣ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮುಂದೆ ಸಾಗುತ್ತಿದ್ದ ವಾಹನದ ಮಾಹಿತಿ ಲಭ್ಯವಾಗಿಲ್ಲ. ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net