ಗಣಪತಿ ಬ್ಯಾಂಕ್‌ನಲ್ಲಿ ಹಳೆ ಮುಖಗಳಿಗೆ ಮಣೆ

bank
ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ಗೆ ಪ್ರಥಮ ಬಾರಿ ನಿರ್ದೇಶಕರಾಗಿ ಆಯ್ಕೆಯಾದ ಸಾಗರ ನಗರಸಭಾ ಸದಸ್ಯೆಯೂ ಆದ ಮಧುಮಾಲತಿ ಪ್ರಮಾಣ ಪತ್ರ ಸ್ವೀಕರಿಸಿದರು. ಎಚ್.ಎಸ್.ಕುಮಾರ್ ಇತರರಿದ್ದರು.
Published on

ಸಾಗರ: ನಗರದ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ 13 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೂವರು ಹೊಸ ಮುಖಗಳನ್ನು ಬಿಟ್ಟರೆ, ಉಳಿದವರೆಲ್ಲರೂ ಹಳಬರೇ ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ವರ್ಗದಿಂದ 12ನೇ ಬಾರಿ ನಿರ್ದೇಶಕರಾಗಿ ಗಜಾನನ ಜೋಯಿಸ್ ಗೆಲುವಿನ ನಗೆ ಬೀರಿ ದಾಖಲೆ ನಿರ್ಮಿಸಿದ್ದಾರೆ. ಉಳಿದಂತೆ ಆರ್.ಶ್ರೀನಿವಾಸ್ ಮೇಸ್ತ್ರಿ, ಕೃಷ್ಣಮೂರ್ತಿ ಭಂಡಾರಿ, ಬಿ.ದೇವೇಂದ್ರ ಭೋಜಪ್ಪ, ವಿ.ಗುರು, ವೈ.ಮೋಹನ್, ರಂಗಧೋಳ್ ವಿನಾಯಕ ರಾವ್ ಗೆಲುವು ಸಾಧಿಸಿದ್ದಾರೆ.

ಎಸ್‌ಸಿ ವಿಭಾಗದಲ್ಲಿ ನಾರಾಯಣ, ಎಸ್‌ಟಿ ಮೀಸಲಾತಿಯಲ್ಲಿ ಎಸ್.ಎಂ.ರಮೇಶ್, ಬಿಸಿಎಂಎ ವಿಭಾಗದಲ್ಲಿ ವಿ.ಶಂಕರ್, ಬಿಸಿಎಂಬಿ ವಿಭಾಗದಿಂದ ದಳವಾಯಿ ಜಿ.ಬಸಲಿಂಗಪ್ಪ, ಮಹಿಳಾ ವಿಭಾಗದಲ್ಲಿ ಮಧುಮಾಲತಿ ಕಲ್ಲಪ್ಪ, ಸರಸ್ವತಿ ನಾಗರಾಜ್ ಜಯಗಳಿಸಿದ್ದಾರೆ. 13 ನಿರ್ದೇಶಕರ ಸ್ಥಾನಕ್ಕೆ 33 ಜನ ಕಣದಲ್ಲಿದ್ದರು. ಚುನಾವಣಾಧಿಕಾರಿಯಾಗಿ ಎಚ್.ಎಸ್.ಕುಮಾರ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net