ಮನೆ ಮೇಲೆ ಮುರಿದು ಬಿದ್ದ ಮರ

sgr rain damage
ಸಾಗರ ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮಳೆ, ಗಾಳಿಯಿಂದ ಎರಡು ಮನೆಗಳ ಮೇಲೆ ಮರ ಬಿದ್ದಿರುವುದು.
Published on

ಸಾಗರ: ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ವಿಪರೀತ ಮಳೆ, ಗಾಳಿಯಿಂದ ಎರಡು ಮನೆಗಳ ಮೇಲೆ ಮರ ಮುರಿದು ಬಿದ್ದು ಅಪಾರ ನಷ್ಟವುಂಟಾಗಿದೆ. ಗೋಡೆಕೊಪ್ಪ ಗ್ರಾಮದ ಚಿಪ್ಪಾಳಿಕೊಪ್ಪ ಪುರುಷೋತ್ತಮ ಅವರ ಮನೆ ಮೇಲೆ ದೊಡ್ಡ ಗಾತ್ರದ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಮನೆಯಲ್ಲಿದ್ದ ಒಬ್ಬರಿಗೆ ಸ್ವಲ್ಪ ಪೆಟ್ಟಾಗಿದ್ದು ಉಳಿದವರು ಬಚಾವಾಗಿದ್ದಾರೆ. ದಿನಬಳಕೆಯ ಎಲ್ಲ ವಸ್ತುಗಳು ಹಾಳಗಿವೆ. ಶೆಡ್ಡಿಕೊಪ್ಪ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಕೋಳೂರು ಗ್ರಾಪಂ ಅಧ್ಯಕ್ಷ ನವೀನ್ ಗೌಡ, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಗ್ರಾಪಂ ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕ ಪರಿಹಾರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net