ಉಜ್ಜಯಿನಿಯಲ್ಲಿ ಸಾವಿರ ವರ್ಷದ ಹಿಂದಿನ ಶಿವಾಲಯ ಪತ್ತೆ

asdasdasdfdgdfg
Published on

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್​ನಗರ ತಾಲೂಕಿನ ಕಲ್ಮೋರಾ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವರ್ಷದ ಹಿಂದಿನ ಶಿವಾಲಯ ಪತ್ತೆಯಾಗಿದೆ.

ಪರ್ವರ್ ಆಳ್ವಿಕೆ ಕಾಲದ ದೇಗುಲ ಇದಾಗಿದ್ದು, ಉತ್ಖನನ ಮುಂದುವರಿದಿದೆ ಎಂದು ವಕಾಂಕರ್ ಸಂಶೋಧನಾ ಸಂಸ್ಥೆಯ ತಜ್ಞ ಡಾ.ವಿಷ್ಣು ಶ್ರೀಧರ್ ಹೇಳಿದ್ದಾರೆ. ಇಲ್ಲಿ ಮಧ್ಯಪ್ರದೇಶದ ಪುರಾತತ್ವ ಇಲಾಖೆ ಉತ್ಖನನ ನಡೆಸುತ್ತಿದೆ. ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಸಮೀಕ್ಷೆ ನಡೆಸುತ್ತಿದ್ದ ವೇಳೆ 12ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪರ್ವರ್ ರಾಜವಂಶಸ್ಥರ ಕಾಲದ ಭೂಮಿಜ್ ಶೈಲಿಯ ದೇವಾಲಯದ ಕುರುಹು ಕಂಡುಬಂದವು. ನಂತರ ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಉತ್ಖನನ ಆರಂಭಿಸಲಾಯಿತು.

15 ದಿನ ಹಿಂದೆ ಎರಡನೇ ಹಂತದಲ್ಲಿ ಭೂಮಿ ಅಗೆಯುತ್ತಿದ್ದಾಗ ಶಿವಾಲಯದ ಮಾದರಿ ಗೋಚರಿಸಿತು ಎಂದು ವಕಾಂಕರ್ ಸಂಸ್ಥೆಯ ತಜ್ಞ ಡಾ. ಧ್ರುವೇಂದ್ರ ಜೋಧಾ ಮಾಹಿತಿ ನೀಡಿದ್ದಾರೆ. ದೇಗುಲವು ಪೂರ್ವಾಭಿಮುಖವಾಗಿದ್ದು, 15 ಮೀಟರ್ ಅಗಲ ಮತ್ತು ಜಗತಿಯಿಂದ 9 ಅಡಿ ಎತ್ತರ ಇದೆ. ಭಗ್ನಗೊಂಡ ಮಂಟಪ, ಗರ್ಭಗುಡಿ, ಶಿವಲಿಂಗ, ವಿಷ್ಣು ಮೂರ್ತಿ ಇನ್ನಿತರ ವಿಗ್ರಹಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net