ಕಸ ವಿಲೇವಾರಿ ಮಾಡದ ಗ್ರಾಪಂ‌ ಕಚೇರಿ ಮುಂದೆಯೇ ಕಸ ಸುರಿದ ಗ್ರಾಮಸ್ಥರು!

kasa
Published on

ಚಾಮರಾಜನಗರ: ತಿಂಗಳಾದರೂ ಕಸ ವಿಲೇವಾರಿ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ತೆರವುಗೊಳಿಸದ ಬಗ್ಗೆ ಆಕ್ರೋಶಗೊಂಡ ತೆರಕಣಾಂಬಿ ಹುಂಡಿ ಗ್ರಾಮದ ಯುವಕರು ಕಸವನ್ನು ಟ್ರ್ಯಾಕ್ಟರ್​ನಲ್ಲಿ ತುಂಬಿಕೊಂಡು ಬಂದು ಗ್ರಾಮ ಪಂಚಯಿತಿ ಕಾರ್ಯಾಲಯದ ಎದುರು ಸುರಿದಿದ್ದಾರೆ.

ಪಿಡಿಒ ಹಾಗೂ ಆಡಳಿತ ಮಂಡಳಿ ವಿರುದ್ಧ ಘೋಷಣೆ‌ ಕೂಗಿ ಕಸ ತೆರವುಗೊಳಿಸದಿದ್ದರೆ ಮತ್ತೆ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net