ದೇವಸ್ಥಾನ ನೆಮ್ಮದಿ ನೀಡುವ ತಾಣ

KDR anand
ಕಡೂರು ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಗ್ರಾಮಸ್ಥರು ಶಾಸಕ ಕೆ.ಎಸ್.ಆನಂದ್ ಅವರನ್ನು ಸನ್ಮಾನಿಸಿದರು. ಚಂದ್ರಪ್ಪ, ಎಂ.ಎಚ್. ರವಿ, ಚೆನ್ನಪ್ಪ, ಬಸವರಾಜು, ಮಂಜು ಇತರರಿದ್ದರು.
Published on

ಕಡೂರು: ತಾಲೂಕಿನಾದ್ಯಂತ ಪ್ರಾಕೃತಿಕವಾಗಿ ಬರದ ಛಾಯೆಯಿದ್ದರೂ ಧಾರ್ಮಿಕ ಕಾರ್ಯಗಳಿಗೆ ಬರವಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಮಚ್ಚೇರಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಗ್ರಾಮಸ್ಥರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ದಿನನಿತ್ಯದ ಜಂಜಾಟಗಳಲ್ಲಿ ಮುಳುಗಿರುವ ನಮಗೆ ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳಾಗಿವೆ. ದೇಗುಲಗಳು ನಿರ್ಮಲ ಭಕ್ತಿ ತೋರುವ ಸ್ಥಳವಾಗಬೇಕೇ ವಿನಃ ಅನವಶ್ಯಕ ಚರ್ಚೆಯ ತಾಣವಾಗಬಾರದು ಎಂದರು.
ಆಧ್ಯಾತ್ಮಿಕ ಚಿಂತನೆಗಳು ಇಲ್ಲಿ ಪ್ರೇರೇಪಣೆಗೊಳ್ಳಬೇಕು. ದೇವಸ್ಥಾನಕ್ಕೆ ನಮ್ಮ ಇತಿಮಿತಿಯಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. 3-4 ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಒಳ್ಳೆಯ ಮಳೆಯಾಗಿ ರೈತರು ನೆಮ್ಮದಿಯ ಬದುಕು ಕಾಣಬೇಕಿದೆ ಎಂದರು.
ದೇವಸ್ಥಾನದ ಮುಖ್ಯಸ್ಥ ಎಂ.ಕೆ.ಚಂದ್ರಪ್ಪ ಮಾತನಾಡಿ, ಸದ್ಭಕ್ತರು ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದರು. ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಎಂ.ಎಚ್.ರವಿ, ಗ್ರಾಪಂ ಸದಸ್ಯ ಚೆನ್ನಪ್ಪ, ಪೂಜಾರಿ ಬಸವರಾಜು, ಎಂ.ಟಿ.ಮಂಜುನಾಥ್, ಎಂ.ಎನ್.ಓಂಕಾರಮೂರ್ತಿ, ಅಶೋಕ್, ಮಂಜು, ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net