ಚನ್ನಪಟ್ಟಣದ ಗೌಡಗೆರೆಯ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಕಿಚ್ಚ ಸುದೀಪ್​

sudeep
Published on

ರಾಮನಗರ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಇಂದು(ಶುಕ್ರವಾರ) ಬೆಳಗ್ಗೆ ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿರುವ 68 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.

ನಿನ್ನೆಯಷ್ಟೇ 50ನೇ ವಸಂತಕ್ಕೆ ಕಾಲಿಟ್ಟಿದ್ದ ಸುದೀಪ್​, ಸರಳವಾಗಿ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮರುದಿನವೇ ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗೌಡಗೆರೆಗೆ ದಂಪತಿ ಸಮೇತ ಆಗಮಿಸಿದ ಸುದೀಪ್​, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಸುದೀಪ್​ ಬರುವ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ಎರಡ್ಮೂರು ತಾಸು ಮೊದಲೇ ದೇವಸ್ಥಾನದ ಬಳಿ ಜಮಾಯಿಸಿದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗೌಡಗೆರೆ ಗ್ರಾಮದಲ್ಲಿ ಇತ್ತೀಚಿಗಷ್ಟೇ ಲೋಕರ್ಪಣೆಯಾದ ಚಾಮುಂಡೇಶ್ವರಿ ವಿಗ್ರಹ ವಿಶ್ವದಲ್ಲೇ ಹೆಸರುವಾಸಿ. ಕಿಚ್ಚನ‌ ಆರಾಧ್ಯ ದೇವತೆ ಕೂಡ ಚಾಮುಂಡೇಶ್ವರಿ ದೇವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net