ಮೋದಿ @71: ಸಮುದ್ರ ಚಿಪ್ಪಿನಲ್ಲಿ ಮೋದಿ ಶಿಲ್ಪ ರಚಿಸಿ ಶುಭ ಕೋರಿದ ಸುದರ್ಶನ್​ ಪಟ್ನಾಯಕ್​

modi
Published on

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆ.17) ಹುಟ್ಟುಹಬ್ಬದ ಸಂಭ್ರಮ. 71ನೇ ವಸಮತಕ್ಕೆ ಕಾಲಿಟ್ಟ ಅವರಿಗೆ ದೇಶ-ವಿದೇಶದಾದ್ಯಂತ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಸಂಖ್ಯಾತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಫೋಟೋ ಹಾಕಿಕೊಂಡು ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಹಲವು ದೇವಸ್ಥಾನಗಳಲ್ಲಿ ಮೋದಿ ಹೆಸ್ರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೆಚ್ಚಿನ ನಾಯಕನಿಗೆ ಶುಭ ಕೋರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಖ್ಯಾತ ಮರಳು ಶಿಲ್ಪಿ ಸುದರ್ಶನ್​ ಪಟ್ನಾಯಕ್​ ಅವರು ಸಮುದ್ರ ಚಿಪ್ಪುಗಳಿಂದ ರಚಿಸಿರುವ ಮೋದಿ ಅವರ ಶಿಲ್ಪದ ಫೋಟೋ ಸಖತ್​ ವೈರಲ್​ ಆಗಿದೆ.

ಖ್ಯಾತ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಶುಕ್ರವಾರ ಪುರಿ ಕಡಲತೀರದಲ್ಲಿ ಮೋದಿ ಅವರ ಚಿತ್ರವನ್ನು ಮರಳಿನಲ್ಲಿ ರಚಿಸಿ, "ಮೋದಿಯವರ ಜನ್ಮದಿನದ ಶುಭಾಶಯಗಳು" ಎಂಬ ಅಕ್ಷರವನ್ನೂ ಮೂಡಿಸಿದ್ದಾರೆ. ಮೋದಿಯವರ ಮರಳು ಶಿಲ್ಪ ಕಲಾಕೃತಿಯ ಸುತ್ತಲೂ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಅಲಂಕರಿಸಲಾಗಿದೆ.

ಟ್ವಿಟರ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿರುವ ಸುದರ್ಶನ್ ಪಟ್ನಾಯಕ್, ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸುದರ್ಶನ್ ಪಟ್ನಾಯಕ್ ಅವರು ಕಳೆದ ವಾರ ಗಣೇಶ ಹಬ್ಬದ ಪ್ರಯುಕ್ರ ಸಮುದ್ರ ಚಿಪ್ಪುಗಳನ್ನು ಬಳಸಿ ಮರಳಿನಲ್ಲಿ ಗಣೇಶ ಕಲಾಕೃತಿ ರಚಿಸಿ ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net