

ಹಾಸನ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಹೊಳೆನರಸೀಪುರ ತಾಲೂಕಿನ ಸುಣ್ಣಕಲ್ ಹೊಸೂರು ಗ್ರಾಮದಲ್ಲಿ ಸಂಭವಿಸಿದೆ.
ಕಿರಣ್ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಬೆಳಗುಲಿ ಗ್ರಾಮದ ಕಿರಣ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಇಂದು ಬೆಳಗ್ಗೆ ಗ್ರಾಮದಿಂದ ವಸತಿ ಶಾಲೆಗೆ ಕಿರಣ್ನನ್ನು ತಂದೆ ಶ್ರೀನಿವಾಸ್ ಅವರು ಕರೆತಂದು ಬಿಟ್ಟು ಹೋಗಿದ್ದರು.
ತಂದೆ ಹೋದ ಅರ್ಧ ಗಂಟೆಯಲ್ಲೇ ನೇಣಿಗೆ ಕಿರಣ್ ನೇಣಿಗೆ ಶರಣಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.