ಇದ್ದವನು ಒಬ್ಬನೇ ಮಗ; ಬೈದು ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ!

Suicide
Published on

ಬಸವಕಲ್ಯಾಣ: ‘‘ಮೊಬೈಲ್ ಫೋನ್ ಜಾಸ್ತಿ ಬಳಸಬೇಡ ಅದರಿಂದ ದೂರವಿರು’’ ಎಂದು ಪಾಲಕರು ಹೇಳಿದ ಬುದ್ಧಿ ಮಾತಿನಿಂದ ಬೇಸತ್ತ ಬಾಲಕನೊಬ್ಬ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜೇಶ್ವರ ಗ್ರಾಮದ ರಾಹುಲ್ ವಿಶ್ವನಾಥ (17) ಮೃತಪಟ್ಟವನು. ಪಾಲಕರಿಗೆ ಏಕೈಕ ಮಗನಾಗಿದ್ದ ಈತ ಸದಾ ಮೊಬೈಲ್ ಫೋನಿನಲ್ಲೇ ಮುಖ ಹುದುಗಿಸಿಕೊಂಡು ಇರುತ್ತಿದ್ದ.

‘‘ಇಷ್ಟೊಂದು ಮೊಬೈಲ್ ಫೋನ್ ಬಳಸೋದು ಸರಿಯಲ್ಲ, ಅದರಿಂದ ದೂರವಿರು’’ ಎಂದು ಪಾಲಕರು ಬುದ್ಧಿಮಾತು ಹೇಳಿದ್ದರು. ಆದರೂ ಆತ ಕೇಳಿರಲಿಲ್ಲ. ಕೊನೆಗೊಮ್ಮೆ ಬೈದಿದ್ದರು.

ಇದರಿಂದ ಪಾಲಕರ ಮೇಲೆಯೇ ಸಿಟ್ಟಾಗಿದ್ದ ಆತ, ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಕೆಲ ಸಮಯದ ಬಳಿಕ ಗಮನಿಸಿದ ಪಾಲಕರು ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net