ಹಗಲಲ್ಲೂ ಬೆಳಗುವ ಬೀದಿದೀಪ

klr light
Published on

ಕೋಲಾರ:ನಗರದಲ್ಲಿ ನಗರಸಭೆಯಿಂದ ಅಳವಡಿಸಿರುವ ಬೀದಿದೀಪಗಳ ಅಸಮರ್ಪಕ ನಿರ್ವಹಣೆಯಿಂದ ಹಗಲಲ್ಲೂ ಬೆಳಗುತ್ತಿವೆ.

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗುವುದು ಸಾಮಾನ್ಯ. ವಿದ್ಯುತ್ ಕೊರತೆ ಎದುರಿಸುತ್ತಿರುವ ಬಗ್ಗೆ ಅರಿವಿದ್ದರೂ ನಗರಸಭೆಯ ಅಽಕಾರಿಗಳು, ಸಿಬ್ಬಂದಿ ಬೀದಿದೀಪ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್ಗಳಿದ್ದು, ಬಡಾವಣೆಗಳ ಮುಖ್ಯರಸ್ತೆ, ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೀದಿದೀಪಗಳನ್ನು ನಗರಸಭೆಯಿಂದ ವಿವಿಧ ಯೋಜನೆಗಳಡಿ ಅಳವಡಿಸಲಾಗಿದೆ. ಅದರ ನಿರ್ವಹಣೆಗೆ ಆಯಾ ಬಡಾವಣೆಯ ಗುತ್ತಿಗೆದಾರನಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಸಿಬ್ಬಂದಿ ಉದಾಸೀನದಿಂದ ನಗರದ ಹಲವು ರಸ್ತೆಗಳಲ್ಲಿ ಬೀದಿದೀಪ ಹಗಲಲ್ಲೂ ಬೆಳಗುತ್ತಿವೆ.
ನಗರದ ಗೌರಿಪೇಟೆ, ಅಂತರಗಂಗೆ ರಸ್ತೆ, ಕೀಲುಕೋಟೆ, ಜಯನಗರ, ಪಿಸಿ ಬಡಾವಣೆ, ಮುನೇಶ್ವರ ನಗರ, ಕಾರಂಜಿಕಟ್ಟೆ, ಗಾಂಽನಗರ, ರಹಮತ್‌ನಗರ, ಶಹಿನ್‌ಷಾ ನಗರ ಹೀಗೆ ಹಲವು ಕಡೆ ಬೀದಿ ದೀಪಗಳು ಉರಿಯುತ್ತಿವೆ. ಅಽಕಾರಿಗಳು ಇದನ್ನು ಕಂಡರೂ ಕಾಣದಂತೆ ಮುನ್ನಡೆಯುತ್ತಾರೆ.
ನಗರ ವ್ಯಾಪ್ತಿಯಲ್ಲಿನ ಕೆಲವು ಬಡಾವಣೆಗಳಲ್ಲಿ ಆಗಾಗ್ಗೆ ಬೀದಿದೀಪಗಳು ಕೈಕೊಡುತ್ತವೆ. ಈ ಬಗ್ಗೆ ನಗರಸಭೆ ಅಽಕಾರಿಗಳಿಗೆ, ಸದಸ್ಯರಿಗೆ ದೂರು ನೀಡಿದರೂ ಶೀಘ್ರ ಸರಿಪಡಿಸುವ ಕೆಲಸ ಮಾಡುವುದಿಲ್ಲ. ಮತ್ತೊಂದು ಕಡೆ ಹಗಲಿನಲ್ಲಿ ಉರಿಯುವ ದೀಪಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪರ್ಕಕ್ಕೆ ಸಿಗದ ದೂರವಾಣಿ:
ನಗರದಲ್ಲಿ ಬೀದಿದೀಪಗಳ ಸಮಸ್ಯೆ ಕಂಡುಬಂದರೆ ದೂರು ನೀಡಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ದೂರವಾಣಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ. ಸಾರ್ವಜನಿಕರ ದೂರನ್ನು ನಗರಸಭೆ ಸಿಬ್ಬಂದಿ ದಾಖಲಿಸಿಕೊಂಡು ನಿವರ್ಹಣೆ ಹೊಣೆ ಹೊತ್ತ ಗುತ್ತಿಗೆದಾರನಿಗೆ ಮಾಹಿತಿ ನೀಡಿ ಸರಿಪಡಿಸಬೇಕು. ಆದರೆ ಅಧಿಕಾರಿಗಳಿಗೆ ದೂರು ಹೋದರೂ ನೋಂದಾಯಿಸಿಕೊಳ್ಳದೆ ಉದಾಸೀನ ತೋರುತ್ತಾರೆ. ನಿರ್ವಹಣೆ ಹೊಣೆಹೊತ್ತವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೀದಿದೀಪಗಳ ನಿರ್ವಹಣೆಗೆಂದು ವಾರ್ಷಿಕವಾಗಿ ನಗರಸಭೆಯ ಬಜೆಟ್‌ನಲ್ಲಿ ಕೋಟ್ಯಂತರ ರೂ. ಮೀಸಲಿರಿಸಲಾಗುತ್ತದೆ. ಗುತ್ತಿಗೆದಾರ ನಿರ್ವಹಣೆ ಮಾಡಿದ ಆಧಾರದ ಮೇರೆಗೆ ನಗರಸಭೆಯಿಂದ ಬಿಲ್ ಬಿಡುಗಡೆ ಮಾಡಬೇಕು. ಪ್ರತಿದಿನ ದೀಪಗಳನ್ನು ಆನ್ ಮತ್ತು ಅಫ್ ಮಾಡಲು ಗುತ್ತಿದಾರನ ಜವಾಬ್ದಾರಿಯಾಗಿರುತ್ತದೆ. ಲಕ್ಷಾಂತರ ಹಣ ವೆಚ್ಚ ಮಾಡಿ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ. ಹಗಲಲ್ಲಿ ಬೀದಿದೀಪ ನಂದಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ವಾಟರ್ ಮನ್‌ಗೆ ಜವಾಬ್ದಾರಿ ನೀಡಬೇಕು.
ಸಾರ್ವಜನಿಕರು ನಂದಿಸಲು ವೈಜ್ಞಾನಿಕವಾಗಿ ಆನ್, ಆಫ್‌ ಮಾಡುವ ಸ್ವೀಚ್ ಅಳವಡಿಸಿರುವುದಿಲ್ಲ, ವೈರ್‌ಗಳನ್ನು ನೇತಾಕಿರುತ್ತಾರೆ. ಇದರಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net