

ಹಾಸನ: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವು ನಿನ್ನೆ(ಆ.9) ಪ್ರಕಟಗೊಂಡಿದ್ದು, ಓರ್ವ ವಿದ್ಯಾರ್ಥಿ ಹೊರತಾಗಿ ಎಲ್ಲ ವಿದ್ಯಾರ್ಥಿಗಳೂ ಪಾಸ್ ಆಗಿರುವುದು ಈ ಷರ್ವದ ವಿಶೇಷ. ಇದರ ಜತೆಗೆ ಮತ್ತೊಂದು ವಿಷೇಶ ಇದೆ. ಈ ಬಾರಿ ಒಟ್ಟಿಗೆ ಪರೀಕ್ಷೆ ಬರೆದಿದ್ದ ಅಮ್ಮ-ಮಗ ಇಬ್ಬರೂ ಪಾಸ್ ಆಗಿದ್ದಾರೆ!
ಹೌದು, ಕಳೆದ ಜುಲೈ 29 ಮತ್ತು 31ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಮತ್ತು ಅವರ ಮಗ ಬಿ.ಆರ್.ಹೇಮಂತ್ ಇಬ್ಬರೂ ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲೆಯಲ್ಲಿ ಬರೆದಿದ್ದರು.
ಎಂಟನೇ ತರಗತಿ ಓದುತ್ತಿರುವಾಗಲೇ ತೀರ್ಥ ಅವರು ಅರ್ಧಕ್ಕೆ ಶಾಲೆ ಬಿಟ್ಟಿದ್ದರು. ಬಳಿಕ ಮದುವೆ ಆಗಿತ್ತು. ತೀರ್ಥ ಅವರ ಮಗ ಹೇಮಂತ್, ವಳಲಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಈ ಬಾರಿ ಅಮ್ಮ-ಮಗ ಇಬ್ಬರೂ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಗ 562 ಅಂಕ ಪಡೆದರೆ, ಅಮ್ಮ 235 ಅಂಕ ಪಡೆದು ಪಾಸಾಗಿದ್ದಾರೆ.