ಧರ್ಮ ಉಳಿಯಬೇಕಂದ್ರೆ ರಾಜಕೀಯಕ್ಕೆ ಬರಲೂ ಸಿದ್ಧ! ಶೀಘ್ರವೇ ಪ್ರಧಾನಿ ಬಳಿಗೆ ನಿಯೋಗ: ಶಾಂತವೀರ ಶ್ರೀಗಳು

bsy
Published on

ಬೆಂಗಳೂರು: 40 ವರ್ಷ ರಾಜ್ಯದಲ್ಲಿ ಬಿ.ಎಸ್​.ಯಡಿಯೂರಪ್ಪ ತಳಮಟ್ಟದಿಂದ ಬಿಜೆಪಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಿದ್ದಾರೆ. ಧರ್ಮದ ವಿರುದ್ಧ ಯಾರೂ ನಡೆದುಕೊಳ್ಳಬಾರದು. ವೀರಶೈವ ಲಿಂಗಾಯತ ಸಮುದಾಯದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಧರ್ಮ ಉಳಿಯಬೇಕಾದರೆ ರಾಜಕೀಯಕ್ಕೆ ಬರಲೂ ಸಿದ್ಧ ಎಂದು ಕೊಳದ ಮಠದ ಶಾಂತವೀರ ಮಹಾಸ್ವಾಮಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶೀಘ್ರದಲ್ಲೇ ಪ್ರಧಾನಿ ಅವರ ಬಳಿ ಸಾಧು ಸಮಾಜದ ವತಿಯಿಂದ ನಿಯೋಗ ಹೋಗಲಾಗುವುದು. ಯಾವುದೇ ಕಾರಣಕ್ಕೂ ಬಿಎಸ್​ವೈ ಅವರನ್ನು ಬದಲಾವಣೆ ಮಾಡದಂತೆ ಮನವಿ ಮಾಡುತ್ತೇವೆ. ಒಂದು ವೇಳೆ ಬದಲಾವಣೆ ಆಗಿದ್ದೇ ಆದರೆ ಅದೇ ಸಮುದಾಯಕ್ಕೆ ಮಣೆ ಹಾಕಿ ಎಂದು ಮನವಿ ಮಾಡಲಾಗುವುದು. ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗದಿದ್ದರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ದಕ್ಷಿಣ ಭಾರತದಲ್ಲಿ ಆಡಳಿತಕ್ಕೆ ಬಿಜೆಪಿ ಬರಲು ಯಡಿಯೂರಪ್ಪ ಅವರೇ ಕಾರಣ. ಒಂದು ವೇಳೆ ಬಿಎಸ್​ವೈ ಅವರನ್ನ ಕೆಳಗಿಳಿಸಬೇಕೆಂದರೆ ಅದೇ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಿ. ಬಿಜೆಪಿಯಲ್ಲಿ 50ಕ್ಕೂ ಹೆಚ್ಚು ವೀರಶೈವ ಲಿಂಗಾಯಿತ ಶಾಸಕರು ಇದ್ದಾರೆ. ಅರವಿಂದ್ ಬೆಲ್ಲದ, ಯತ್ನಾಳ್, ಬೊಮ್ಮಾಯಿ ಅವರನ್ನೂ ಪರಿಗಣಿಸಿ. ಬೇರೆ ಸಮುದಾಯದವರನ್ನ ಸಿಎಂ ಮಾಡಿದರೆ ಬಿಜೆಪಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ. ವೀರಶೈವ ಲಿಂಗಾಯಿತರಿಗೆ ಮೋಸ ಮಾಡಿದರೆ 2000 ಮಠಾಧೀಶರು ಇದರ ವಿರುದ್ಧ ಇದ್ದಾರೆ ಎಂದು ಶ್ರೀಗಳು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net