ದೇವಿಯ ಪಾದುಕೆ ಮೇಲೆ ಗಂಟೆಗಟ್ಟಲೇ ಕುಳಿತು ಕೌತುಕ ಮೂಡಿಸಿದ ಕೌಜುಗ ಪಕ್ಷಿ!

gowjuga
Published on

ವಿಜಯನಗರ: ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ತಾಂಡದ ದೇವಸ್ಥಾನದಲ್ಲಿ ದೇವಿಯ ಪಾದುಕೆ ಮೇಲೆ ಸುಮಾರು 2 ತಾಸು ಕುಳಿತ ಕೌಜುಗ ಪಕ್ಷಿಯೊಂದು ಅಚ್ಚರಿ ಮೂಡಿಸಿದೆ.

ಶ್ರೀ ಮರಿಯಮ್ಮ ಸೇವಾಲಾಲ್ ದೇವಾಲಯದಲ್ಲಿ ದೇವಿಯ ಪಾದುಕೆ ಕೌಜುಗ ಪಕ್ಷಿ ಕುಳಿತಿತ್ತು. ಅದನ್ನು ಅಲ್ಲಿಂದ ಓಡಿಸಲು ಭಕ್ತರು ಪ್ರಯತ್ನಿಸದರೂ ಅದು ಸುಮಾರು 2 ತಾಸು ಆ ಜಾಗ ಬಿಟ್ಟು ಕದಲಿಲ್ಲ. ದೇವಿಗೆ ಖುದ್ದು ಪಕ್ಷಿಯೇ ಹರಕೆ ಹೊತ್ತು ಕೂತಿರುವಂತೆ ಭಾಸವಾಗಿತ್ತು.

ಸಹಜವಾಗಿ ಪಕ್ಷಿಗಳು ಶಬ್ದ ಮಾಡಿದ್ರೆ ಹೊರಟು ಹೋಗುತ್ತವೆ. ಆದರೆ ಎರಡು ತಾಸು ಅಲ್ಲೇ ಕುಳಿತದ್ದು ನೆರೆದಿದ್ದವರಲ್ಲಿ ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net