ನಕ್ಸಲ್ ನಿಗ್ರಹ ದಳ, ಪೊಲೀಸ್ ಸಿಬ್ಬಂದಿಯ ವಿಶೇಷ ಆಹಾರ ಭತ್ಯೆ ದರ ಹೆಚ್ಚಳ

Vidhana Soudha vvani
Published on

ಬೆಂಗಳೂರು: ನಕ್ಸಲ್ ನಿಗ್ರಹ ದಳ(ಎಎನ್ಎಫ್) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ ಸಲ್ಲಿಸಿದ್ದ ಕೋರಿಕೆಗೆ ಸ್ಪಂದಿಸಿದ ಸರ್ಕಾರ, ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಿದೆ. 130 ರೂಪಾಯಿ ಇದ್ದ ಭತ್ಯೆ ದರವನ್ನ 300 ರೂ.ಗೆ ಹೆಚ್ಚಿಸಿದೆ.

ಎಎನ್​ಎಫ್, ಪೊಲೀಸ್ ಸಿಬ್ಬಂದಿ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ವಿಶೇಷ ಆಹಾರ ಹೆಚ್ಚುವರಿ ಭತ್ಯೆ ಅನ್ವಯವಾಗಲಿದೆ.

ಸರ್ಕಾರ ಹೊರಡಿಸಿರುವ ಭತ್ಯೆ ಹೆಚ್ಚಳ ಆದೇಶ, ನಿಮ್ಹಾನ್ಸ್ ಆಸ್ಪತ್ರೆಯ ಆಹಾರ ತಜ್ಞರು ನಿಗದಿಪಡಿಸಿರುವ 5600 kcal ನೀಡುವ ಪೌಷ್ಟಿಕ ಆಹಾರವನ್ನು ಭದ್ರತಾ ಪಡೆಗಳಿಗೆ ಒದಗಿಸಲು ಸಹಾಯಕವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net