ವಿಲನ್‌ಗೊಂದು ಸ್ಮಾರ್ಟ್ ಸಾಂಗ್: ‘ಡಬಲ್ ಇಸ್ಮಾರ್ಟ್’ನಲ್ಲಿ ಬಿಗ್‌ಬುಲ್ ಸಂಜಯ್ ದತ್

sanju 1
Published on

ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲಿ ನಾಯಕನನ್ನು ಪರಿಚಯಿಸುವ, ಬಿಲ್ಡಪ್ ನೀಡುವ ಸಾಂಗ್ ಇರುತ್ತದೆ. ಖಳನಾಯಕರಿಗೆ ಸಾಂಗ್ ಇರುವುದು ಅಪರೂಪ. ಆದರೆ, ಪೂರಿ ಜಗನ್ನಾಥ್ ನಿರ್ದೇಶನದ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ಖಳನಾಯಕನಿಗಾಗಿಯೇ ವಿಶೇಷ ಸಾಂಗ್ ಮಾಡಲಾಗಿದೆ. ಚಿತ್ರದಲ್ಲಿ ಸಂಜಯ್ ದತ್ ‘ಬಿಗ್‌ಬುಲ್’ ಎಂಬ ವಿಲನ್ ಪಾತ್ರ ಮಾಡಿದ್ದಾರೆ. ಈ ಪಾತ್ರ ವಿಶೇಷವಾಗಿದ್ದು, ಹೀಗಾಗಿ ಪಾತ್ರದ ಹೆಸರಿನ ಸಾಂಗ್‌ನಲ್ಲಿ ಸಂಜಯ್ ದತ್ ಹಾಗೂ ನಾಯಕ ರಾಮ್ ಪೋತಿನೇನಿ ಇಬ್ಬರು ಜುಗಲ್‌ಬಂದಿಯಲ್ಲಿ ಸ್ಟೆಪ್ ಹಾಕಿದ್ದಾರೆ. ‘ಬಿಗ್‌ಬುಲ್’ ಶೀರ್ಷಿಕೆಯ ಹಾಡಿಗೆ ಭಾಸ್ಕರ್ ಭಟ್ಲ ಸಾಹಿತ್ಯ ರಚಿಸಿದ್ದು, ಪೃಥ್ವಿ ಚಂದ್ರ ಹಾಗೂ ಸಂಜನಾ ಕಲ್ಮಂಜೆ ಧ್ವನಿಯಾಗಿದ್ದಾರೆ. ಈಗಾಗಲೇ ಮೂರು ಸಾಂಗ್‌ಗಳು ಬಿಡುಗಡೆಯಾಗಿದ್ದು, ಇತ್ತೀಚೆಗಷ್ಟೆ ಈ ನಾಲ್ಕನೇ ಹಾಡನ್ನು ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ರಾಮ್ ಪೋತಿನೇನಿಗೆ ಕಾವ್ಯಾ ಥಾಪರ್ ಜೋಡಿಯಾಗಿದ್ದಾರೆ. ಉಳಿದಂತೆ ಸಯಾಜಿ ಶಿಂಧೆ, ಬಾನಿ ಜೆ, ಗೆಟಪ್ ಸೀನು, ಅಲಿ, ಮಕರಂದ್ ದೇಶಪಾಂಡೆ ತಾರಾಗಣದಲ್ಲಿದ್ದಾರೆ. ‘ಡಬಲ್ ಇಸ್ಮಾರ್ಟ್’ ಇದೇ ಆ. 15ರಂದು ಪ್ಯಾನ್ ಇಂಡಿಯಾ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net