

ಉತ್ತರಕನ್ನಡ: ಶಿರಸಿಯಲ್ಲಿ ಮಾರಿಕಾಂಬಾ ಜಾತ್ರೆ ಮಾರ್ಚ್ 3ರಿಂದ ಪ್ರಾರಂಭವಾಗಿದ್ದು ಅದ್ದೂರಿಯಿಂದ ನಡೆಯುತ್ತಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಲ್ಲಿ ಬಾವಿಯಲ್ಲಿ ಬೈಕ್, ಕಾರುಗಳನ್ನು ಓಡಿಸುವಂತಹ ಸಾಹಸ ಪ್ರದರ್ಶನಗಳು ಸಾಮಾನ್ಯ.
ಆದರೆ ಈ ಬಾರಿ ಬಾವಿಯಲ್ಲಿ ಕಾರುಗಳನ್ನು ಚಾಲನೆ ಮಾಡುವ ವೇಳೆ ಅವಘಡ ಸಂಭವಿಸಿದೆ. ಶಿರಸಿಯ ಬಿಡಕಿ ಬೈಲಿನಲ್ಲಿ ಸಾಹಸಪ್ರದರ್ಶನಗಳು ನಡೆಯುತ್ತಿದ್ದು, ಇಂದು ಬಾವಿಯಲ್ಲಿ ಮೂರ್ನಾಲ್ಕು ಕಾರುಗಳನ್ನು ಪರಿಣಿತರು ಚಾಲನೆ ಮಾಡುತ್ತಿದ್ದರು. ಈ ವೇಳೆ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ, ಪಲ್ಟಿಯಾಗಿ ಬಿದ್ದಿವೆ. ಚಾಲಕರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ. (ದಿಗ್ವಿಜಯ ನ್ಯೂಸ್)