ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಪಠ್ಯಪುಸ್ತಕ ಪರಿಷ್ಕರಣೆಯೇ ಕಾರಣ: ಹೊಸ ಬಾಂಬ್​ ಸಿಡಿಸಿದ ಬಿಜೆಪಿ

siddaramaiah
Published on

ಬೆಂಗಳೂರು: ಪಠ್ಯ-ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಪರಸ್ಪರ ಕೆಸರೆರಚಾಟ ಮುಂದುವರಿದಿದ್ದು, ಬಿಜೆಪಿ ಮತ್ತೊಂದು ಚಾಟಿ ಬೀಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಸೋಲಿಗೆ ಪಠ್ಯ ಪುಸ್ತಕ ಪರಿಸ್ಕರಣೆಯೇ ಕಾರಣ ಎಂದು ಬಿಜೆಪಿ ಹೊಸ ಬಾಂಬ್​ ಸಿಡಿಸಿದೆ.

'ಚಾಮುಂಡೇಶ್ವರಿ ದೇವಿಯ ಪಠ್ಯವನ್ನು ತೆಗೆಸಿದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. ನಾಡದೇವತೆಯ ಶಾಪ ತಟ್ಟದೇ ಇರುತ್ತದೆಯೇ?' ಎಂದು ಸಾಮಾಜಿಕ ಜಾಲತಾಣ ಕೂನಲ್ಲಿ ಬಿಜೆಪಿ ಪ್ರಶ್ನಿಸಿದೆ.

Koo App
ಚಾಮುಂಡೇಶ್ವರಿ ದೇವಿಯ ಪಠ್ಯವನ್ನು ತೆಗೆಸಿದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ 30 ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. ನಾಡದೇವತೆಯ ಶಾಪ ತಟ್ಟದೇ ಇರುತ್ತದೆಯೇ? #ಶಿಕ್ಷಣವಿರೋಧಿಕಾಂಗ್ರೆಸ್‌-BJP KARNATAKA (@BJP4Karnataka)24 June 2022

'#ಶಿಕ್ಷಣ ವಿರೋಧಿ ಕಾಂಗ್ರೆಸ್‌' ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಕೂ ಮಾಡಿರುವ ಬಿಜೆಪಿ, 'ಅದು ಚಾಂಮುಂಡೇಶ್ವರಿ ಶಾಪವೇ' ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು, 'ದೇವಿ ಶಾಪದಿಂದಲೇ ಸೋತಿರುವುದು' ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು 'ಮಾಡಿದುಣ್ಣೋ ಮಹರಾಯ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net