ತಾವರೆಕೊಪ್ಪದ ಲಯನ್ ಸಫಾರಿ ಸೇರಿದ ಕರಿ ಚಿರತೆ ಮರಿ

black cheeta
ಹೊನ್ನಾವರ-ಕುಮಟಾ ನಡುವಿನ ರಸ್ತೆಯ ಸೇತುವೆ ಬಳಿ ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ.
Published on

ಶಿವಮೊಗ್ಗ: ತಾವರೆಕೊಪ್ಪದ ಲಯನ್ ಸಫಾರಿಗೆ ಅತಿಥಿಯೊಂದು ಆಗಮನವಾಗಿದೆ. ಹೊನ್ನಾವರ ತಾಲೂಕಿನ ಕತಗಾಲ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟ ಹೆಣ್ಣು ಕರಿಚಿರತೆ ಮರಿಯನ್ನು ತಂದು ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ವರ್ಷದ ಕರಿಚಿರತೆಯನ್ನು ಮಂಗಳವಾರ ರಾತ್ರಿ ತರಲಾಗಿದೆ. ಹೊನ್ನಾವರ-ಕುಮಟಾ ನಡುವಿನ ರಸ್ತೆಯ ಸೇತುವೆ ಬಳಿ ತಾಯಿಯಿಂದ ಬೇರ್ಪಟ್ಟು ಯಾವುದೇ ಚಟುವಟಿಕೆಯಿಲ್ಲದೆ ಮಲಗಿತ್ತು. ಸಾರ್ವಜನಿಕರು ಓಡಿಸಲು ಯತ್ನಿಸಿದ್ದರೂ ಕರಿ ಚಿರತೆ ನಿಶಕ್ತವಾಗಿದ್ದ ಕರಿಚಿರತೆ ಅಲ್ಲಿಂದ ಜಾಗ ಕದಲಿಸಿರಲಿಲ್ಲ. ಓಡಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ತಾವರೆಕೊಪ್ಪದ ಲಯನ್ ಸಫಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಲಯನ್ ಸಫಾರಿಯ ಡಿಸಿಎಫ್ ಯೋಗೀಶ್ ಮತ್ತು ತಂಡದವರು ಸ್ಥಳಕ್ಕೆ ತೆರಳಿ ಕರಿಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು ಈ ಮೂಲಕ ಸಫಾರಿಯಲ್ಲಿ ಕರಿಚಿರತೆಗಳ ಸಂಖ್ಯೆ ಎರಡಕ್ಕೇರಿದೆ. ಮಿಂಚು ಎಂಬ ಹೆಣ್ಣು ಕರಿಚಿರತೆ ಸಫಾರಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net