ಶಾಲಾ ವಾಹನ ಮರಕ್ಕೆ ಡಿಕ್ಕಿ

school bus
ಮೂಗುತಿಹಳ್ಳಿ ಸಮೀಪದ ಶಾಲೆಯೊಂದರ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿರುವುದು.
Published on

ಆಲ್ದೂರು: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಮರಕ್ಕೆ ಡಿಕ್ಕಿ ಹೊಡೆದು ಒಂದು ಮಗುವಿಗೆ ತೀವ್ರ ಪೆಟ್ಟು ಬಿದ್ದಿದ್ದು, ಉಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದಿಣ್ಣೇಕೆರೆ ಗ್ರಾಮದ ಯುಕೆಜಿ ವಿದ್ಯಾರ್ಥಿಯ ಮುಖಕ್ಕೆ ಹಾಗೂ ಕಣ್ಣಿಗೆ ಪೆಟ್ಟು ಬಿದ್ದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾನ್‌ನಲ್ಲಿ 20ಕ್ಕೂ ಹೆಚ್ಚು ಮಕ್ಕಳಿದ್ದು ದಿಣ್ಣೇಕೆರೆ, ಕೂದುವಳ್ಳಿ, ಗುಮ್ಮನಖಾನ್, ತೋರಣ ಮಾವು ಗ್ರಾಮದ ಮಕ್ಕಳು ಪ್ರತಿದಿನ ಈ ಶಾಲಾ ವಾಹನದಲ್ಲಿ ಸಂಚರಿಸುತ್ತಾರೆ.
ಮೂಗುತಿಹಳ್ಳಿ ಸಮೀಪದ ಖಾಸಗಿ ಶಾಲೆಯೊಂದರ ವ್ಯಾನ್ ಸೋಮವಾರ ಪರೀಕ್ಷೆ ಮುಗಿಸಿಕೊಂಡ ಮಕ್ಕಳನ್ನು ಮಧ್ಯಾಹ್ನ ಮನೆಗೆ ವಾಪಸ್ ಕರೆದುಕೊಂಡು ಬರುವ ಮಾರ್ಗಮಧ್ಯೆ ದಿಣ್ಣೆಕೆರೆ ಗ್ರಾಮಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿ ಮರಕ್ಕೆ ಡಿಕ್ಕಿಯಾಗಿದೆ. ವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಘಾತ ಸಂಭವಿಸಿದ ಸಮೀಪದಲ್ಲೇ ವಿದ್ಯುತ್ ಕಂಬವಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net