ಸ್ಯಾಂಡಲ್​ವುಡ್​ನ ಜನಪ್ರಿಯ ಡೈಲಾಗ್​ ರೈಟರ್​​ ಗುರು ಕಶ್ಯಪ್​ ಇನ್ನಿಲ್ಲ

guru kasyap
Published on

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಸಂಭಾಷಣೆಕಾರ ಗುರು ಕಶ್ಯಪ್ (45) ಅವರು ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಪಂಚಿಂಗ್​ ಡೈಲಾಗ್​ನಿಂದಲೇ ಬಹುಬೇಗ ಖ್ಯಾತಿ ಪಡೆದಿದ್ದ ಗುರು ಕಶ್ಯಪ್​, ಬಹುಬೇಡಿಕೆಯ ಸಂಭಾಷಣೆಕಾರ ಆಗಿದ್ದರು. ಪುಷ್ಪಕ ವಿಮಾನ, ಸುಂದರಾಂಗ ಜಾಣ, ಪ್ರಿಯಾಂಕಾ ದೇವಕಿ, ಇನ್ಸ್‌ಪೆಕ್ಟರ್‌ ವಿಕ್ರಂ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಮಾನ್ಸೂನ್​ ರಾಗ, ಬೈರಾಗಿ, ವ್ಹೀಲ್​ ಚೇರ್​ ರೋಮಿಯೋ... ಸೇರಿದಂತೆ ಹಲವು ಸಿನಿಮಾಗಳ ಪ್ರಾಜೆಕ್ಟ್​ ಅನ್ನು ಕೈಗೆತ್ತಿಕೊಂಡಿದ್ದ ಗುರು ಕಶ್ಯಪ್​, ಈ ಸಿನಿಮಾಗಳ ಡೈಲಾಗ್​ ಬರೆಯುತ್ತಿದ್ದರು. ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

ಗುರು ಕಶ್ಯಪ್​ ನಿಧನಕ್ಕೆ ಸ್ಯಾಂಡಲ್​ವುಡ್​ ಕಂಬನಿ ಮಿಡಿದಿದೆ. ಪ್ರತಿಭಾವಂತ ಸಂಭಾಷಣೆಕಾರನ ನಿಧನ ಚಂದನವಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.

'ನಾನು ಕಂಡಂತ ಅತಿ ಪ್ರತಿಭಾವಂತರಲ್ಲಿ ಗುರು ಕಶ್ಯಪ್ ಕೂಡ ಒಬ್ಬರು. ಪುಷ್ಪಕವಿಮಾನ, ಸುಂದರಾಂಗಜಾಣ,100 ಚಿತ್ರಗಳ dialogue writer.. ಸಂಜೆ ನಗುತ್ತಾ normal ಆಗಿ ಇದ್ದವರು ರಾತ್ರಿ ಜೀವ ತೊರದಿದ್ದಾರೆ! ಒಬ್ಬ ಒಳ್ಳೆಯ ವ್ಯಕ್ತಿ, ಶ್ರೇಷ್ಠ ಬರಹಗಾರರನ್ನು ಕಳೆದು ಕೊಂಡಿದ್ದೇವೆ. ಓಂ ಶಾಂತಿ' ಎಂದು ನಟ ಅರವಿಂದ್​ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net