ಸಂಚಾರಿ ವಿಜಯ್​ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಕ್ಷಣ ಕ್ಷಣಕ್ಕೂ ಕಡಿಮೆಯಾಗುತ್ತಿದೆ ಉಸಿರಾಟ

sanchari vijay
Published on

ಬೆಂಗಳೂರು: ಜೂ.12ರ ರಾತ್ರಿ ನಗರದಲ್ಲಿ ಸಂಭವಿಸಿದ ಬೈಕ್​ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿರುವ ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್​ ಅವರು ನ್ಯೂರಾಲಜಿಕಲಿ ಮತ್ತೆ ರಿಕವರಿ ಆಗೋದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.

ವಿಜಯ್​ರ ಮೆದುಳಿನ ಬಲಭಾಗದಲ್ಲಿ ಬಹಳ ಗಾಯವಾಗಿತ್ತು. ಮೆದುಳಿನಲ್ಲಿ ಊತ ಜಾಸ್ತಿಯಾಗಿತ್ತು. ಶನಿವಾರ ರಾತ್ರಿ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಸರ್ಜರಿ ಕೂಡ ಮಾಡಿದ್ವಿ. ಬ್ರೈನ್ ಫಂಕ್ಷನ್ ನಿಂತು ಹೋಗಿದೆ. ಎಷ್ಟೇ ಟ್ರೀಟ್​ಮೆಂಟ್ ಕೊಟ್ರು ಅವರು ಸ್ಪಂದಿಸುತ್ತಿಲ್ಲ. ಉಸಿರಾಟ ಕೂಡ ಕ್ಷಣ ಕ್ಷಣಕ್ಕೂ ಕಡಿಮೆಯಾಗುತ್ತಿದೆ ಎಂದು ಡಾ. ಅರುಣ್ ನಾಯಕ್ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net