

ಬಣಕಲ್: ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ನಟ ಪ್ರಥಮ್ ಹೇಳಿದರು.
ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯಲ್ಲಿ ಕೃಷಿಕರಾದ ಯಶೋದಮ್ಮ ಅವರ ಗದ್ದೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾತನಾಡಿದರು.
ಯುವ ಜನತೆ ಅತಿಯಾದ ಮೊಬೈಲ್ ಬಳಕೆಯಿಂದ ಗ್ರಾಮೀಣ ಆಟಗಳನ್ನು ಮರೆಯುತ್ತಿದ್ದಾರೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕೆಸರುಗದ್ದೆಯ ಆಟಗಳು ಸಹಕಾರಿ ಎಂದರು.
ಕೆಸರುಗದ್ದೆಯಲ್ಲಿ ಪುರುಷರ, ಮಹಿಳೆಯರ ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್, ನೂರು ಮೀ. ಕೆಸರುಗದ್ದೆ ಓಟ ಮತ್ತಿತರ ಕ್ರೀಡೆಗಳಲ್ಲಿ ಯುವಕ, ಯುವತಿಯರ ತಂಡ, ಸಾರ್ವಜನಿಕರು ಸ್ಪರ್ಧಿಸಿದ್ದರು.
ತರುವೆ ಗ್ರಾಪಂ ಅಧ್ಯಕ್ಷ ಬಿ.ಎಂ.ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಭರತ್, ಸೌಜನ್ಯಾ, ಸಂಜಯ ಗೌಡ, ಅಶ್ವತ್ಥ್, ಪರೀಕ್ಷಿತ್, ಯಶೋದಮ್ಮ, ಸಂತೋಷ್ ಕೋಟ್ಯಾನ್, ಮಧು, ನವೀನ್ ಹಾವಳಿ ಇತರರಿದ್ದರು.