

ಹಾಸನದ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿದೆ.
ದೋಣಿಗಾಲ್ ಬಳಿ ಹೆದ್ದಾರಿಯ ಅರ್ಧಭಾಗ ಕುಸಿದ ಹಿನ್ನೆಯಲ್ಲಿ ಹೆದ್ದಾರಿಯನ್ನು ತಹಸೀಲ್ದಾರ್ ಜಯಕುಮಾರ್ ಬಂದ್ ಮಾಡಿದ್ದಾರೆ. ಲಘು ವಾಹನಗಳಿಗೆ ಬಿಸ್ಲೆ ಘಾಟ್ ಮೂಲಕ ಸಂಚರಿಸಲು ಅನುಮತಿ ಕೊಡಲಾಗಿದೆ. ಭಾರಿ ವಾಹನಗಳಿಗೆ ಮಡಿಕೇರಿ ಮೂಲಕ ಮಂಗಳೂರಿಗೆ ತೆರಳಲು ಸೂಚನೆ ಇದೆ. ಕಳೆದ ವರ್ಷವೂ ಮಳೆಗೆ ರಸ್ತೆಯ ಅರ್ಧಭಾಗ ಹಾನಿಗೊಳಗಾಗಿತ್ತು. ಈಗ ರಸ್ತೆ ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.