'ಮಹಾ' ಮಳೆಗೆ ಗೋಡೆ ಕುಸಿದು 14 ಮಂದಿ ಸಾವು! ವರುಣನ ಆರ್ಭಟಕ್ಕೆ ತತ್ತರಿಸಿದ ವಾಣಿಜ್ಯ ನಗರಿ

Wall Collapses in Mumbai
Published on

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಗೆ ಗೋಡೆ ಕುಸಿದು 14 ಮಂದಿ ಮೃತಪಟ್ಟಿದ್ದು, ಸಾವು-ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ವರುಣನ ಆರ್ಭಟಕ್ಕೆ ದೇಶದ ವಾಣಿಜ್ಯ ನಗರಿ ಮುಂಬೈ ಅಕ್ಷರಶಃ ನಲುಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಪ್ರವಾಹ ಭೀತಿ ಎದುರಾಗಿದ್ದು, ಮನೆ ಬಿಟ್ಟು ಹೊರಬಾರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಗರದ ಚೆಂಬೂರಿನ ಭಾರತ್ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಮನೆಯ ಗೋಡೆ ಕುಸಿದು 11 ಜನ ಮೃತಪಟ್ಟಿದ್ದಾರೆ. ವಿಕ್ರೋಲಿಯಲ್ಲಿ ಕಟ್ಟಡ ಕುಸಿದು ಮೂವರು ಮೃತಪಟ್ಟಿದ್ದಾರೆ. ಮನೆಯ ಅವಶೇಷಗಳಡಿ ಸಿಲುಕಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ಹೊರ ತೆಗೆದಿದ್ದು, ಮತ್ತಷ್ಟು ಮಂದಿ ಗೋಡೆಯ ಅವಶೇಷದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

ಮುಂಬೈನ ಗಾಂಧಿ ಮಾರುಕಟ್ಟೆ ಜಲಾವೃತವಾಗಿದ್ದು, ವಾಹನಗಳು ನೀರಲ್ಲಿ ಮುಳುಗುತ್ತಿವೆ. ಸಿಯಾನ್​ ರೈಲ್ವೆ ಹಳಿ ಮೇಲೂ ನೀರು ಆವರಿಸಿ ದೊಡ್ಡ ಕೆರೆಯಂತೆ ಭಾಸವಾಗುತ್ತಿದ್ದು, ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ತಗ್ಗು ಪ್ರದೇಶಗಳಾದ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net