ನಿರಂತರ ಮಳೆಗೆ ಕಾಲೇಜಿನ ಛಾವಣಿ ಕುಸಿತ: ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

New Project(13)
Published on

ಕಲಬುರಗಿ: ನಿರಂತರ ಮಳೆಗೆ ಕಾಲೇಜು ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಮೂವರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿನಲ್ಲಿ ಸಂಭವಿಸಿದೆ.

ಪ್ರಥಮ ಪಿಯು ವಿದ್ಯಾರ್ಥಿನಿ ನಿಖಿತಾ ತಲೆಗೆ ಗಂಭೀರ ಪೆಟ್ಟಾಗಿದೆ. ಗುರುವಾರ ಬೆಳಗ್ಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರು. ಈ ವೇಳೆ ಮೇಲ್ಛಾವಣಿ ಕುಸಿದಿದೆ.

ಕಾಲೇಜಿನ ಕಟ್ಟಡ ಹಳೆಯದ್ದಾಗಿದ್ದು, ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಛಾವಣಿ ಕುಸಿದಿದೆ. ಗಂಭೀರ ಗಾಯಗೊಂಡ ನಿಖಿತಾ ಸೇರಿ ಮೂವರು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net