ಭಾರಿ ಮಳೆ: ಬೈಕ್ ಸಮೇತ ನೀರಲ್ಲಿ ಕೊಚ್ಚಿಹೋದ ದಂಪತಿ ಸಾವು

rain death case
Published on

ವಿಜಯನಗರ: ಭಾರೀ ಮಳೆಗೆ ಹಳ್ಳದಲ್ಲಿ ಬೈಕ್​ ಸಮೇತ ದಂಪತಿ ಕೊಚ್ವಿ ಹೋಗಿ ದುರಂತ ಅಂತ್ಯ ಕಂಡ ಘಟನೆ ಹೂವಿನಹಡಗಲಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಮತ್ತು ನಿರ್ಮಲಾ ಮೃತರು.

ಇವರಿಬ್ಬರೂ ಬೈಕ್​ನಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಳಕಲ್​ಗೆ ಹೋಗಿ ಮಂಗಳವಾರ ಸಂಜೆ ವಾಪಸ್ ಬರುತ್ತಿದ್ದರು. ಮಾರ್ಗಮಧ್ಯೆ ಹೂವಿನಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ಮದ ಇರೋ ಹಳ್ಳದ ಬಳಿ ಮಳೆ ನೀರಲ್ಲಿ ಕೊಚ್ಚಿಹೋಗಿದ್ದರು. ಬುಧವಾರ ಬೆಳಗ್ಗೆ ದಂಪತಿ ಶವಗಳು ಪತ್ತೆಯಾಗಿವೆ. ಸಾವಲ್ಲೂ ದಂಪತಿ ಒಂದಾದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net