ಅಕ್ಕನಹಳ್ಳಿ ಗ್ರಾಪಂಗೆ ಎ.ಆರ್.ಪುಟ್ಟರಾಜು ಅವಿರೋಧ ಆಯ್ಕೆ

12_Nugehali_Election_1
ನುಗ್ಗೇನಹಳ್ಳಿ ವ್ಯಾಪ್ತಿಯ ಅಕ್ಕನಹಳ್ಳಿ ವೃತ್ತದ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಅಕ್ಕನಹಳ್ಳಿ ಎ.ಆರ್. ಪುಟ್ಟರಾಜು ಅವರನ್ನು ಸದಸ್ಯರು, ಮುಖಂಡರು ಅಭಿನಂದಿಸಿದರು. ಶಿವರಾಮೇಗೌಡ, ಉಮೇಶ್, ರವಿಕುಮಾರ್, ರಾಜಕುಮಾರ್, ನವೀನ್, ದಿನೇಶ್, ಸೌಭಾಗ್ಯಾ, ರತ್ನಾ, ಶಾಂತಮ್ಮ, ನಂಜುಂಡೇಗೌಡ, ಇದ್ದರು.
Published on

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ವೃತ್ತದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಕ್ಕನಹಳ್ಳಿ ಗ್ರಾಮದ ಎ.ಆರ್.ಪುಟ್ಟರಾಜು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಶಾಂತಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಕ್ಕನಹಳ್ಳಿ ಗ್ರಾಮದ ಎ.ಆರ್.ಪುಟ್ಟರಾಜು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹರೀಶ್ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಎ.ಆರ್.ಪುಟ್ಟರಾಜು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರಸಿದ್ಧ ತೆಂಗಿನ ಕಾಯಿ ಸಂತೆ ನಡೆಯುವ ಜಾಗಕ್ಕೆ ಸೋಲಾರ್ ದೀಪಗಳ ಅಳವಡಿಕೆ ಜತೆಗೆ ಸಂತೆ ನಡೆಯುವ ಜಾಗಗಳ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಾಸು, ಮುಖಂಡರಾದ ಬಾಣನಕೆರೆ ಶಿವರಾಮೇಗೌಡ, ತೋಟಿ ನಾಗರಾಜ್, ದಾಸಪುರ ವಿಕ್ಟರ್, ನವೀನ್, ಗಣೇಶ್, ಪಿಡಿಒ ನಂಜುಂಡೇಗೌಡ, ಕಾರ್ಯದರ್ಶಿ ಸಂದೀಪ್ ರಾಜ್, ದಿಲೀಪ್, ಗ್ರಾಪಂ ಸದಸ್ಯರಾದ ಉಮೇಶ್, ರವಿಕುಮಾರ್, ರಾಜಕುಮಾರ್, ಎಂ.ಬಿ.ದಿನೇಶ್, ಸೌಭಾಗ್ಯಾ ಲೋಕೇಶ್, ಶಶಿಕಲಾ, ಕೃಷ್ಣಮೂರ್ತಿ, ರಾಜಮ್ಮ, ಜಿಸಿತಾ ಮೇರಿ, ಪುಟ್ಟಶೆಟ್ಟಿ, ಜಯರಾಮ್, ತಿಮ್ ಶೆಟ್ಟಿ, ಸಮುದ್ರಳ್ಳಿ ಗಣೇಶ್, ರಂಗೇಗೌಡ, ಮಂಜು, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net