ಪಿಎಸ್​ಐ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಕೋರಿ ಬೃಹತ್ ಪ್ರತಿಭಟನೆ

protest psi job
Published on

ಕಲಬುರಗಿ: ಇತ್ತೀಚೆಗೆ ಬಿಡುಗಡೆಯಾದ 545 ಪಿಎಸ್​ಐ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಆಕಾಂಕ್ಷಿಗಳು ಗುರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 371 (ಜೆ) ಅಡಿ 2016ರಲ್ಲಿ ಹೊರಡಿಸಿದ ಸುತ್ತೋಲೆಯಂತೆ ಮೀಸಲಾತಿ ನೀಡಬೇಕಿತ್ತು. ಪಿಎಸ್​ಐ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ರಾಜ್ಯ ವ್ಯಾಪ್ತಿ ಪಟ್ಟಿಯಲ್ಲಿ ಪರಿಗಣಿಸಿ, ಉಳಿದ ಅಭ್ಯರ್ಥಿಗಳನ್ನು 371(ಜೆ) ಅಡಿ ಸೀಮಿತಗೊಳಿಸಿ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ಅತಿ ಹೆಚ್ಚು ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಮೆರಿಟ್​ ಆಧರಿಸಿ ರಾಜ್ಯ ಪಟ್ಟಿಯಲ್ಲಿ ಪ್ರಕಟಿಸದೆ, ಎಲ್ಲರನ್ನೂ 371(ಜೆ) ಅಡಿಯೇ ಸೀಮಿತಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾನಿರತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈಗಿನ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ನಿಯಮದಂತೆ ಹೊಸ ಪಟ್ಟಿ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ‌ ಮೂಲಕ ಗೃಹ ಸಚಿವರಿಗೆ ಪ್ರತಿಭಟನಾಕಾರರು ಮನವಿಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net