'ಅಗ್ನಿಪಥ’ಕ್ಕೆ ವಿರೋಧ: ಸಿಕಂದರಾಬಾದ್​ನಲ್ಲಿ ಕೈಮೀರಿದ ಪರಿಸ್ಥಿತಿ, ಪ್ರಯಾಣಿಕರಿದ್ದ ರೈಲು ಬೋಗಿಗೆ ಪೆಟ್ರೋಲ್​ ಬಾಂಬ್​ ದಾಳಿ

1289339
Published on

ಹೈದರಾಬಾದ್​: ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರುದ್ಧ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ತೆಲಂಗಾಣದ ಹೈದರಾಬಾದ್​ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಸಿಕಂದರಾಬಾದ್​ನಲ್ಲಿ ಪರಿಸ್ಥಿತಿ ಕೈಮೀರಿದ್ದು, ಪ್ರಯಾಣಿಕರಿದ್ದ ರೈಲು ಬೋಗಿಗೆ ಉದ್ರಿಕ್ತ ಗುಂಪು ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಾಳಿಯಲ್ಲಿ ಗುಂಡು, ಲಾಠಿ ಚಾರ್ಜ್​ ಅಸ್ತ್ರ ಪ್ರಯೋಗಿಸದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಕಂಡ ಕಂಡ ರೈಲಿನ ಬೋಗಿಗಳಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದೆ. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದು, ನೂಕುನುಗ್ಗಲಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತನನ್ನು ದಾಮೋದರಕುರಷಿಯಾ ಎಂದು ಗುರುತಿಸಲಾಗಿದೆ. 8 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲು ಸಂಚಾರ ರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net