ಒಗ್ಗೂಡಿ ಆಚರಿಸಿದರೆ ಅಗತ್ಯ ನೆರವು

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ರಮೇಶ್‌ಬಾಬು ರಾಮಲಿಂಗಯ್ಯ, ಪರಶಿವಮೂರ್ತಿ ಇದ್ದರು.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ರಮೇಶ್‌ಬಾಬು ರಾಮಲಿಂಗಯ್ಯ, ಪರಶಿವಮೂರ್ತಿ ಇದ್ದರು.
Published on

ಚಾಮರಾಜನಗರ: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಬುಧವಾರ ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಹಾಗೂ ದಸರಾ ಆಚರಣೆ ಸಂಬಂಧ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ತಾಲೂಕು ಆಡಳಿತವು ಅ.28ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲು ಸಹಕಾರ ನೀಡಲಾಗುವುದು. ಮತ್ತೊಂದು ದಿನ ಸಮುದಾಯದ ಮಠಾಧೀಶರು, ಸಚಿವರು ಹಾಗೂ ಮುಖಂಡರನ್ನು ಆಹ್ವಾನಿಸಿ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.

ಜಯಂತಿಯನ್ನು ಸಮುದಾಯದ ಎಲ್ಲಾ ಜನರು ಒಗ್ಗಟ್ಟಾಗಿ ಆಚರಿಸಿದರೆ ತಾಲೂಕು ಆಡಳಿತ ಹಾಗೂ ವೈಯಕ್ತಿಕವಾಗಿ ನೆರವು ನೀಡಲಾಗುವುದು. ಈ ಬಾರಿ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ಒಂದೇ ದಿನ ತಾಲೂಕು ಮಟ್ಟದ ದಸರೆಯನ್ನು ಆಚರಿಸಲು ಸರ್ಕಾರದ ನಿರ್ದೇಶನವಿದೆ. ಅದರಂತೆ ತಾಲೂಕು ಆಡಳಿತ ದಿನಾಂಕ ನಿಗದಿಪಡಿಸಲಿ ಎಂದು ಶಾಸಕ ಗಣೇಶ್ ಪ್ರಸಾದ್ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಮೇಶ್‌ಬಾಬು, ತಾಪಂ ಇಒ ರಾಮಲಿಂಗಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಪುರಸಭೆ ಸದಸ್ಯರಾದ ಪಿ.ಗಿರೀಶ್, ಕುಮಾರ್, ಪಟ್ಟಾಬಿ, ಎನ್.ಕುಮಾರ್, ಅಣ್ಣಯ್ಯಸ್ವಾಮಿ, ಮುಖ್ಯಾಧಿಕಾರಿ ವಸಂತಕುಮಾರಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎನ್.ಮಲ್ಲೇಶ್ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net