VIDEO| 100ನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್​ರ ಪಾದಪೂಜೆ ಮಾಡಿದ ಪ್ರಧಾನಿ ಮೋದಿ

modi
Published on

ನವದೆಹಲಿ: 100ನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್​ ಅವರ ಪಾದಪೂಜೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದರು. ‘

ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಇಂದಿಗೆ (ಜೂ.18) 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶತಾಯುಷಿ ತಾಯಿಯ ಹುಟ್ಟುಹಬ್ಬ ಹಿನ್ನೆಲೆ ಅಮ್ಮನಿಗೆ ಭಾವನಾತ್ಮಕವಾಗಿ ಸುದೀರ್ಘ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಪ್ರಧಾನಿ, ಬಾಲ್ಯದಲ್ಲಿನ ಅಮ್ಮನ ಜತೆಗಿನ ವಿಶೇಷ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅಮ್ಮನ ಮಮತೆ, ಪ್ರೀತಿ, ತ್ಯಾಗ ಎಲ್ಲವನ್ನೂ ನೆನಪು ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಇಂದು(ಶನಿವಾರ) ಮುಂಜಾನೆ ತಾಯಿ ಹೀರಾಬೆನ್​ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ, ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ದೇವರ ಮುಂದೆ ತಾಯಿ ಜತೆ ಪೂಜೆಗೆ ಕುಳಿತು ಪ್ರಾರ್ಥಿಸಿದರು. ಈ ವಿಶೇಷ ಕ್ಷಣದ ಫೋಟೋಗಳನ್ನು ಟ್ವೀಟ್​ ಮಾಡಿಕೊಂಡಿರುವ ಪ್ರಧಾನಿ, 'ನೂರನೇ ವಸಂತಕ್ಕೆ ಕಾಲಿಟ್ಟ ನನ್ನ ತಾಯಿ ಅವರಿಂದ ಆಶೀರ್ವಾದ ಪಡೆದೆ...' ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net