ರಾತ್ರೋರಾತ್ರಿ ಶಾಸಕ ಪ್ರೀತಂ ಗೌಡರ ಫೋಟೋಗಳಿಗೆ ಕಲ್ಲು ಹೊಡೆದ ಕಿಡಿಗೇಡಿಗಳು!

preetam gowda
Published on

ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ಹಾನಿಗೊಳಿಸಿರುವ ಘಟನೆ ಹಾಸನ ನಗರದ ಎಂ.ಜಿ.ರಸ್ತೆಯಲ್ಲಿ ಸಂಭವಿಸಿದೆ.

ಉದ್ಘಾಟನೆಗೆ ಸಿದ್ದಗೊಂಡಿದ್ದ ಫುಡ್ ಕೋರ್ಟ್​ನಲ್ಲಿ ಅಳವಡಿಸಿದ್ದ ಬೋರ್ಡ್​ನಲ್ಲಿ ಶಾಸಕ ಪ್ರೀತಂ ಗೌಡರ ಫೋಟೋ ಇತ್ತು. ಯಾರೋ ಕಿಡಿಗೇಡಿಗಳು ಬೋರ್ಡ್​ನಲ್ಲಿದ್ದ ಪ್ರೀತಂ ಗೌಡರ ಫೋಟೋವನ್ನು ಭಾನುವಾರ ರಾತ್ರಿ ಹೊಡೆದು ಹಾಕಿ ಪರಾರಿಯಾಗಿದ್ದಾರೆ.

ಸುಮಾರು ನೂರು ಮೀಟರ್ ಉದ್ದ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಆಹಾರ ಪದಾರ್ಥ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನು ಕೆಲವೇ ದಿನದಲ್ಲಿ ಉದ್ಘಾಟನೆ ಆಗಲಿದೆ. ಈ ಫುಡ್ ಕೋರ್ಟ್​ನ 5 ಕಡೆ ಶಾಸಕರ ಭಾವಚಿತ್ರವುಳ್ಳ ಬೋರ್ಡ್ ಹಾಕಲಾಗಿತ್ತು. ಈ ಪೈಕಿ ಬೋರ್ಡ್​ನಲ್ಲಿ ಶಾಸಕರ ಫೋಟೋಗೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net