

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು ಜಿಲ್ಲೆಯನ್ನು ಅನಿಮಿಯಾಮುಕ್ತ ಜಿಲ್ಲೆಯಾಗಿಸಲು ಆರೋಗ್ಯ ಇಲಾಖೆ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಸಕಲ ಪ್ರಯತ್ನ ಮಾಡುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮದಿಂದ ಎಲ್ಲವೂ ಅಂದುಕೊಂಡಂತೆ ನಡೆದರೆ ಮೈಸೂರು ಜಿಲ್ಲೆ ಶೀಘ್ರದಲ್ಲೇ ಅನಿಮಿ ಮುಕ್ತ ಜಿಲ್ಲೆಯಾಗಲಿದೆ.
ಆರೋಗ್ಯ ಇಲಾಖೆಯು ಕೈಗೊಂಡ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಶೇ.57ರಷ್ಟು (5 ವರ್ಷದೊಳಗಿನ)ಮಕ್ಕಳಿಗೆ, 15 ರಿಂದ 49 ವರ್ಷದೊಳಗಿನ ಮಹಿಳೆಯರಿಗೆ ಶೇ.48ರಷ್ಟು ರಕ್ತಹೀನತೆ ಕಂಡು ಬಂದಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು ಮಕ್ಕಳು, ಗರ್ಭಿಣಿಯರಿಗೆ ಸೂಕ್ತ ಆರೈಕೆ ನೀಡಿ ಮೈಸೂರನ್ನು ಅನಿಮೀಯಾ ಮುಕ್ತಗೊಳಿಸಲು ಮುಂದಾಗಿದೆ. ಜಿಲ್ಲೆಯ 2.24 ಲಕ್ಷ ವಿದ್ಯಾರ್ಥಿಗಳನ್ನು ರಕ್ತಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ 34 ಸಾವಿರ ಗರ್ಭಿಣಿರಿಗೆ ಪರೀಕ್ಷೆ ಮಾಡಲಾಗಿದ್ದು, 2013 ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಹಿಮೋಗ್ಲೋಬಿನ್ ಅಂಶವು ಕಡಿಮೆಯಾದಾಗ ಅನಿಮೀಯಾ(ರಕ್ತಹೀನತೆ) ಉಂಟಾಗುತ್ತದೆ. ಇದರಿಂದ ದೇಹದ ನಾನಾ ಭಾಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. 2019-20ನೇ ಸಾಲಿನ ನಡೆದ ಎನ್‌ಎಚ್‌ಎಸ್-5 ಸಮೀಕ್ಷಾ ವರದಿಯಂತೆ ಜಿಲ್ಲೆಯಲ್ಲಿ 6 ರಿಂದ 59 ತಿಂಗಳೊಳಗಿನ ಶಿಶುಗಳು ಶೇ.57.2ರಷ್ಟು, 15 ರಿಂದ 49 ವರ್ಷದೊಳಗಿನ ಶೇ.48ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರುವ ಅಂಶ ಬೆಳಕಿಗೆ ಬಂದಿದೆ.
ರಕ್ತಹೀನತೆಗೆ ಒಳಗಾದ ಶಿಶುಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವುದರಿಂದ ಆಯಾಸ, ನಿಶ್ಯಕ್ತಿ, ಉಸಿರಾಟದ ತೊಂದರೆ, ನಾಲಗೆಯಲ್ಲಿ ಸೆಳೆತ, ತಲೆ ನೋವು, ಕಲಿಕಾ ಸಾಮರ್ಥ್ಯ, ಗ್ರಹಿಕಾ ಸಾಮರ್ಥ್ಯ ಕಗ್ಗುವಿಕೆ, ಆಯಾಸಗೊಳ್ಳುವಿಕೆ ಮತ್ತು ಶಾಲಾ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ನಿರಾಸಕ್ತಿ, ಭಾಷಾ ಹಿಡಿತವಿಲ್ಲದೇ ಇರುವುದು ಕಂಡುಬರುತ್ತದೆ. ಅಲ್ಲದೇ ಶಿಶುವಿನ ಭೌತಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಅನಿಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಎಂಬ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಯೋಜನೆಯಂತೆ ಮೊದಲಿಗೆ ಒಟ್ಟು 2493 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 2.24 ಲಕ್ಷ ವಿದ್ಯಾರ್ಥಿಗಳಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷೆ ಮಾಡಿಸಲಾಗುತ್ತಿದೆ. ನಂತರ ಅನಿಮೀಯಾ ಇರುವ ವಿದ್ಯಾರ್ಥಿಗಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೇರಿಸಲಾಗುತ್ತದೆ. ಇಲ್ಲಿ ವೈದ್ಯರು ವಿದ್ಯಾರ್ಥಿಗೆ ಇರುವ ತೊಂದರೆಯ ಪ್ರಮಾಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುತ್ತಾರೆ. ಒಂದು ವೇಳೆ ಇಲ್ಲಿ ಗುಣವಾಗದಿದ್ದರೆ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
ಈವರೆಗೆ ಜಿಲ್ಲೆಯಲ್ಲಿ 34,510 ಗರ್ಭಿಣಿಯರು ನೋಂದಣಿಯಾಗಿದ್ದು, ಇವರೆಲ್ಲರಿಗೂ ಈಗಾಗಲೇ ರಕ್ತ ಪರೀಕ್ಷೆ ಮಾಡಿಸಲಾಗಿದೆ. ಇವರಲ್ಲಿ 284 ಜನರಿಗೆ ಸಿವಿಯರ್ ಅನಿಮೀಯಾ ಹಾಗೂ 1731 ಜನರಿಗೆ ಮೈಲ್ಡ್ ಮತ್ತು ಮಾಡರೇಟ್ ಅನಿಮೀಯಾ ಕಂಡುಬಂದಿದೆ. ಸಾಮಾನ್ಯ ತೊಂದರೆ ಇರುವವರಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ತೊಂದರೆ ಇರುವವರನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗೆ ರವಾನಿಸಲಾಗಿದೆ.
ತಿ.ನರಸೀಪುರ 284, 23061ಪಿರಿಯಾಪಟ್ಟಣ 321, 22582ನಂಜನಗೂಡು 331, 33020ಕೆ.ಆರ್. ನಗರ 296, 22650ಹುಣಸೂರು 348, 25475ಎಚ್.ಡಿ. ಕೋಟೆ 367, 29195ಮೈಸೂರು 546, 68300ತಾಲೂಕು, ಶಾಲೆಗಳು, ಒಟ್ಟು ವಿದ್ಯಾರ್ಥಿಗಳುಅನಿಮೀಯಾ ಪತ್ತೆಗೆ ಗುರುತಿಸಿರುವ ಶಾಲೆಗಳುಡಾ.ಪಿ.ಎಸ್. ಕುಮಾರಸ್ವಾಮಿ, ಡಿಎಚ್‌ಒ.ಆಧುನಿಕ ಜೀವನಶೈಲಿಯ ಪರಿಣಾಮ ಒಟ್ಟು ಜನಸಂಖ್ಯೆಯಲ್ಲಿ ಶೇ.50ಕ್ಕೂ ಹೆಚ್ಚು ಜನರಲ್ಲಿ ರಕ್ತಹೀನತೆ ಕಂಡು ಬರುತ್ತಿದೆ. ಇವರಿಗೆ ಸೂಕ್ತ ಔಷಧ ನೀಡುವುದಲ್ಲದೇ ಅಗತ್ಯ ಆಹಾರ ಕ್ರಮ ರೂಢಿಸಿಕೊಳ್ಳಲು ಮಾರ್ಗದರ್ಶನ ಮಾಡಿ ನಗರವನ್ನು ಅನಿಮೀಯ ಮುಕ್ತಗೊಳಿಸಲು ಆರೋಗ್ಯ ಇಲಾಖೆ ಕಾರ್ಯನಿರತವಾಗಿದೆ.