242 ಪ್ರಯಾಣಿಕರಿದ್ದ ವಿಮಾನ ಅಹಮದಾಬಾದ್​ ಏರ್ಪೋರ್ಟ್​ ಬಳಿ ಪತನ! | Plane

dk - 2025-06-12T141419.741
Published on

Plane : ಗುಜರಾತ್​ನ ಅಹಮದಾಬಾದ್​ ಏರ್ಪೋಟ್​​ ಬಳಿ ವಿಮಾನ ಪತನವಾಗಿದೆ ಎಂದು ಗುರುವಾರ ವರದಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ದಟ್ಟಹೊಗೆ ಹೊರ ಬರುತ್ತಿರುವ ದೃಶ್ಯಗಳು ವೈರಲ್​ ಆಗುತ್ತಿವೆ.

ವಿಮಾನ ಅಪಘಾತದ ನಂತರ, ಅಹಮದಾಬಾದ್‌ನ ಮೇಘಾನಿ ಪ್ರದೇಶದಲ್ಲಿ ಬೆಂಕಿಯ ದೊಡ್ಡ ಜ್ವಾಲೆಗಳು ಕಾಣಿಸಿಕೊಂಡಿವೆ. ದೂರದಿಂದ ಕಪ್ಪು ಹೊಗೆಯ ಮೋಡವು ಗೋಚರಿಸುತ್ತಿದೆ.

ಸುಮಾರು 242 ಪ್ರಯಾಣಿಕರು ಇದ್ದರು ಎಂದು ನಂಬಲಾಗಿದೆ. ತಾಂತ್ರಿಕದೋಷದಿಂದ ವಿಮಾನ ಪತನವಾಗದೆ ಎಂದು ಹೇಳಲಾಗುತ್ತಿದೆ. ಆದರೆ , ಸದ್ಯಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net