ಫಿಲಿಪೈನ್​ ಮಾಜಿ ಅಧ್ಯಕ್ಷ ಬೆನಿಗ್ನೋ ಅಕ್ವಿನೊ ನಿಧನ

Aquino
Published on

ಮನಿಲಾ: ಫಿಲಿಪೈನ್​ನ ಮಾಜಿ ಅಧ್ಯಕ್ಷ ಬೆನಿಗ್ನೋ ಅಕ್ವಿನೊ(61) ನಿಧನರಾದರು. ಇವರಿಗೆ 61 ವರ್ಷ ವಯಸ್ಸಾಗಿತ್ತು.

ನೊಯ್ನಾಯ್​ ಎಂದೇ ಪ್ರಸಿದ್ಧರಾಗಿದ್ದ ಬೆನಿಗ್ನೋ ಅಕ್ವಿನೊ ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ವಿಜೋನ್ ನಗರದ ಕ್ಯಾಪಿಟಲ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದರು.

ಅಕ್ವಿನೊ 2010ರಿಂದ 2016ರವರೆಗೆ ಫಿಲಿಪೆನ್ಸ್​ನ ಅಧ್ಯಕ್ಷರಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ಹಲವು ಹಗರಣ ನಡೆದಿತ್ತು. ಅಧಿಕಾರಾವಧಿ ಅಂತ್ಯಗೊಂಡ ಬಳಿಕ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net